ಕರ್ನಾಟಕ

karnataka

ETV Bharat / sitara

ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಸಿನಿಮಾ 'ಶಿವಾಜಿ ಸೂರತ್ಕಲ್'! - ಡಿಟೆಕ್ಟಿವ್ ಶಿವಾಜಿ

ನಟ ರಮೇಶ್ ಅಭಿನಯದ 101ನೇ ಸಿನಿಮಾ 'ಶಿವಾಜಿ ಸೂರತ್ಕಲ್' ಹಿಂದಿಯಲ್ಲಿ ಡಬ್ ಆಗಿದ್ದು, ಮೇ 31 ರಂದು ರಾತ್ರಿ 8 ಗಂಟೆಗೆ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

shivaji
shivaji

By

Published : May 26, 2021, 3:19 PM IST

ಕಳೆದ ವರ್ಷ ಫೆಬ್ರವರಿಯಲ್ಲಿ ತೆರೆಕಂಡ ನಟ ರಮೇಶ್ ಅಭಿನಯದ 101ನೇ ಸಿನಿಮಾ 'ಶಿವಾಜಿ ಸೂರತ್ಕಲ್' ಸಿನಿ ಪ್ರೇಮಿಗಳಿಗೆ ಇಷ್ಟವಾಗಿತ್ತು. ಹಿಂದಿಯಲ್ಲಿ ಡಬ್ ಆಗಿರುವ ಈ ಚಿತ್ರ ಇದೀಗ ಮೇ 31 ರಂದು ರಾತ್ರಿ 8 ಗಂಟೆಗೆ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಹಿಂದಿ ವೀಕ್ಷಕರನ್ನು ಸೆಳೆಯಲು ಶೀರ್ಷಿಕೆಯನ್ನು ‘ಡಿಟೆಕ್ಟಿವ್ ಶಿವಾಜಿ’ ಎಂದು ಬದಲಾಯಿಸಲಾಗಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಶಿವಾಜಿ ಸೂರತ್ಕಲ್ ಪಾತ್ರದಲ್ಲಿ ನಟಿಸಿದ್ದು, ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ರೇಖಾ, ಅರೋಹಿ ನಾರಾಯಣ್ ಮತ್ತು ವಿನಯ್ ಗೌಡ, ಅವಿನಾಶ್, ರಾಮ್ ಮಂಜೋನಾಥ್, ರಘು ರಾಮ್ ಅನಕಪ, ಸೂರ್ಯ ವಸಿಷ್ಠ ಮತ್ತು ಸೋಮಜಿತ್ ಗುಪ್ತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಬಲ ಮಂತ್ರಿಯ ಮಗ ರೋಶನ್ ರವಿ ನಿಗೂಢವಾಗಿ ರಣಗಿರಿ ರೆಸಾರ್ಟ್’ನಲ್ಲಿ ಸಾಯುತ್ತಾನೆ. ಈ ಪ್ರಕರಣವನ್ನು ಪೊಲೀಸ್ ಅಧಿಕಾರಿ ಶಿವಾಜಿ (ರಮೇಶ್ ಅರವಿಂದ್)ಗೆ ಹಸ್ತಾಂತರಿಸಲಾಗುತ್ತದೆ. ಕೊಲೆ ಪ್ರಕರಣ ಕೈಗೆತ್ತಿಕೊಂಡ ನಂತರ ಅವರು ರೆಸಾರ್ಟ್’ಗೆ ಭೇಟಿ ನೀಡುತ್ತಾರೆ ಮತ್ತು ಕೊಲೆ ಪ್ರಕರಣವನ್ನು ಭೇದಿಸುತ್ತಾರೆ.

ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ಚಿತ್ರತಂಡವು ಇದರ ಮುಂದುವರಿದ ಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರು "ಶಿವಾಜಿ ಸೂರತ್ಕಲ್ ಮೊದಲ ಚಿತ್ರದಲ್ಲಿ 100 ನೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಆದ್ದರಿಂದ ಇದರ ಮುಂದುವರಿದ ಭಾಗದಲ್ಲಿ ಅವರು 110 ನೇ ಪ್ರಕರಣವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.

ABOUT THE AUTHOR

...view details