ಕರ್ನಾಟಕ

karnataka

ETV Bharat / sitara

ಕಂಗನಾ ಅಭಿಮಾನಿಗಳಿಂದ ಕರೀನಾ ಕಪೂರ್​​​​ಗೆ ಪ್ರಶ್ನೆಗಳ ಸುರಿಮಳೆ...! - ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​​ನಲ್ಲಿ ನೆಪೋಟಿಸಮ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಕಂಗನಾ ಅಭಿಮಾನಿಗಳು ಕರೀನಾ ಕಪೂರ್ ಮುಂದೆ ಅನೇಕ ಪ್ರಶ್ನೆಗಳನ್ನು ಇರಿಸಿದ್ದಾರೆ.

kangana slams kareena
ಕರೀನಾ ಕಪೂರ್​​​

By

Published : Aug 5, 2020, 6:09 PM IST

ಬಾಲಿವುಡ್​​ನಲ್ಲಿ ಸ್ವಜನಪಕ್ಷಪಾತಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗೆ ಪೂರ್ಣವಿರಾಮ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಕೊಂಡ ನಂತರ ನಟಿ ಕಂಗನಾ ರಣಾವತ್ ನೆಪೋಟಿಸಮ್ ಬಗ್ಗೆ ಧ್ವನಿ ಎತ್ತಿದ್ದರು.

ನೆಪೋಟಿಸಮ್ ಕುರಿತಂತೆ ಕಂಗನಾ ರಣಾವತ್ ಕರಣ್ ಜೋಹರ್​ ಅವರನ್ನು ದೂರಿದ್ದರು. ನಂತರ ಅವರ ಅಭಿಮಾನಿಗಳು ಸ್ಟಾರ್​​ ಮಕ್ಕಳಾದ ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಅವರ ಬಗ್ಗೆ ಮಾತನಾಡಿದ್ದರು. ಆದರೆ ಕರೀನಾ 2 ದಿನಗಳ ಹಿಂದೆ ಇದಕ್ಕೆ ಪ್ರತಿಕ್ರಿಯಿಸಿ ನಮ್ಮನ್ನು ಸ್ಟಾರ್​​​ಗಳನ್ನಾಗಿ ಮಾಡಿದ್ದು ಜನರು, ಈಗ ಅವರೇ ನಮ್ಮತ್ತ ಆರೋಪಿಸುತ್ತಿದ್ದಾರೆ. ನೆಪೋಟಿಸಮ್ ಬಗ್ಗೆ ಚರ್ಚಿಸುತ್ತಿರುವುದು ಅರ್ಥಹೀನ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ಅಭಿಮಾನಿಗಳು ಕರೀನಾ ಕಪೂರ್​​ ಯಶಸ್ಸಿಗೆ ಅರ್ಹ ನಟಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಕರೀನಾ ಕಪೂರ್ ಸೇರಿದಂತೆ ಇತರ ಸ್ಟಾರ್ ಕಿಡ್​​ಗಳು ತಮ್ಮ ಪ್ರಭಾವ ಬಳಸಿ ಯಶಸ್ಸು ಗಳಿಸಿದ್ದಾರೆ ಎಂದು ಕಂಗನಾ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಕರೀನಾ ಕಪೂರ್ ಅವರೇ, ನಿಜ ಜನರೇ ನಿಮ್ಮನ್ನು ಸ್ಟಾರ್ ಆಗಿ ಮಾಡಿದ್ದು, ಜನರೇ ನಿಮಗೆ ವೈಭವದ ಜೀವನ ನೀಡಿರುವುದು. ಆದರೆ ಇದಕ್ಕೆ ನೀವು ಅರ್ಹರಲ್ಲ. ನಿಮ್ಮ ಆತ್ಮೀಯರೊಬ್ಬರು ಬಾಲಿವುಡ್ ಬಿಡುವಂತೆ ಕಂಗನಾ ಅವರಿಗೆ ಹೇಳಿದ್ದೇಕೆ..? ಬಿಗ್ ಬ್ಯಾನರ್ ಚಿತ್ರಗಳಿಂದ ಸುಶಾಂತ್​ ಅವರನ್ನು ರಿಜೆಕ್ಟ್ ಮಾಡಿದ್ದೇಕೆ..? ಕಂಗನಾರನ್ನು ಮಾಟಗಾತಿ ಹಾಗೂ ಸುಶಾಂತ್ ಅವರನ್ನು ರೇಪಿಸ್ಟ್​​​ ಎಂದು ಹೇಳಿದ್ದೇಕೆ...? ಸ್ಟಾರ್ ನಟನ ಪುತ್ರರೊಬ್ಬರು ಕಂಗನಾ ಅವರನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಆಕೆ ಮೇಲೆ ಕ್ರಿಮಿನಲ್ ಕೇಸ್ ದಾಖಲಿದ್ದು ಏಕೆ..? ಸುಶಾಂತ್ ಹಾಗೂ ಕಂಗನಾ ಅವರನ್ನು ಬಾಲಿವುಡ್​​​ನ ಯಾವುದೇ ಪಾರ್ಟಿಗಳಿಗೆ ಏಕೆ ಆಹ್ವಾನಿಸುತ್ತಿರಲಿಲ್ಲ...? ಅವರ ಹುಟ್ಟುಹಬ್ಬಕ್ಕಾಗಲೀ, ಸಿನಿಮಾ ಬಿಡುಗಡೆಗಾಗಲೀ, ಯಶಸ್ಸಿಗಾಗಲೀ ಸುಶಾಂತ್ ಹಾಗೂ ಕಂಗನಾಗೆ ನೀವೆಲ್ಲಾ ಏಕೆ ಶುಭ ಕೋರುತ್ತಿರಲಿಲ್ಲ...? ಈ ಎಲ್ಲಾ ಪ್ರಶ್ನೆಗಳಿಗೂ ನೀವು ಉತ್ತರಿಸಬೇಕು ಎಂದು ಕಂಗನಾ ಅಭಿಮಾನಿಗಳು ಕರೀನಾ ಕಪೂರ್​ ಮೇಲೆ ಕಿಡಿ ಕಾರಿದ್ದಾರೆ.

ಸುಶಾಂತ್ ಅವರನ್ನು ನೀವು ರೇಪಿಸ್ಟ್ ಎಂದು ಕರೆದಿದ್ದರಿಂದ ಅವರು ಬಹಳ ನೊಂದಿದ್ದರು. ನೀವೆಲ್ಲರೂ ಸೇರಿ ಆತನನ್ನು ಮಾನಸಿಕವಾಗಿ ಕೊಂದಿದ್ದಿರಿ. ಈ ವಿಷಯವನ್ನು ಡೈವರ್ಟ್ ಮಾಡಲು ಪ್ರಯತ್ನಿಸಬೇಡಿ ಎಂದು ಕಂಗನಾ ಅಭಿಮಾನಿಗಳು ಹೇಳಿದ್ದಾರೆ.

ಇತ್ತೀಚೆಗೆ ಕರೀನಾ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನಾ, ರಾಜ್​​​​ಕುಮಾರ್ ರಾವ್ ಎಲ್ಲರೂ ಹೊರಗಿನಿಂದ ಬಂದವರು ಆದರೆ ಅವರು ತಮ್ಮ ಶ್ರಮದಿಂದ ಬಾಲಿವುಡ್​​​​ನಲ್ಲಿ ಎತ್ತರದ ಸ್ಥಾನದಲಿದ್ದಾರೆ. ಅದೇ ರೀತಿ ನಾನೂ ಹಾಗೂ ಆಲಿಯಾ ಭಟ್ ಬಹಳ ಕಷ್ಟ ಪಟ್ಟು ಮುಂದೆ ಬಂದಿದ್ದೇವೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಂಗನಾ ಅಭಿಮಾನಿಗಳು ಕರೀನಾಗೆ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿದ್ದಾರೆ.

ABOUT THE AUTHOR

...view details