ಕರ್ನಾಟಕ

karnataka

ETV Bharat / sitara

ಮಹಾರಾಷ್ಟ್ರ ಜನತೆ ಮುಂದೆ ಕ್ಷಮೆಯಾಚಿಸುವಂತೆ ಕಂಗನಾಗೆ ರಾವತ್ ಆಗ್ರಹ - ಮುಂಬೈ ಪೊಲೀಸರು

ಮುಂಬೈಯನ್ನು ಮಿನಿ ಪಾಕಿಸ್ತಾನ ಅಂತ ಕರೆದು ವಿವಾದವನ್ನು ಮೈಮೇಲೆ ಎಳೆದಕೊಂಡಿರುವ ನಟಿ ಕಂಗನಾ ರಣಾವತ್​ ಮಹಾರಾಷ್ಟ್ರ ಬಳಿ ಕ್ಷಮೆಯಾಚಿಸಬೇಕು ಎಂದು ಶಿವಸೇನೆ ಸಂಸದ ಸಂಜಯ್​ ರಾವತ್ ಒತ್ತಾಯಿಸಿದ್ದಾರೆ.

Sanjay Raut
ಸಂಜಯ್​ ರಾವತ್- ಕಂಗನಾ

By

Published : Sep 6, 2020, 2:17 PM IST

ಮುಂಬೈ: ಸುಶಾಂತ್​ ಸಿಂಗ್​​ ರಜಪೂತ್​ ಪರ ದನಿ ಎತ್ತಿ ಹೇಳಿಕೆಗಳನ್ನು ನೀಡುತ್ತಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಮಹಾರಾಷ್ಟ್ರ ಬಳಿ ಕ್ಷಮೆಯಾಚಿಸಬೇಕು ಎಂದು ಶಿವಸೇನೆ ಸಂಸದ ಸಂಜಯ್​ ರಾವತ್ ಆಗ್ರಹಿಸಿದ್ದಾರೆ.

"ಆ ಹುಡುಗಿ (ಕಂಗನಾ) ಮೊದಲು ಮಹಾರಾಷ್ಟ್ರ ಜನತೆ ಮುಂದೆ ಕ್ಷಮೆಯಾಚಿಸಬೇಕು. ಬಳಿಕ ನಾನು ಆಕೆ ಬಳಿ ಕ್ಷಮೆ ಕೇಳುವ ಕುರಿತು ಆಲೋಚಿಸುವೆ. ಆಕೆ ಮುಂಬೈಯನ್ನು ಮಿನಿ ಪಾಕಿಸ್ತಾನ ಅಂತ ಕರೆದಿದ್ದಾಳೆ. ಅಹಮದಾಬಾದ್​ ಅನ್ನು ಹಾಗೆ ಕರೆಯುವ ಧೈರ್ಯ ಆಕೆಗಿದೆಯಾ" ಎಂದು ಸಂಜಯ್​ ರಾವತ್ ಪ್ರಶ್ನಿಸಿದ್ದಾರೆ.

ಶಿವಸೇನೆ ಸಂಸದ ಸಂಜಯ್​ ರಾವತ್

"ಶಿವಸೇನೆಯ ನಾಯಕ ಸಂಜಯ್ ರಾವತ್ ನನಗೆ ಮುಂಬೈಗೆ ಹಿಂತಿರುಗಬಾರದೆಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ಯಾಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ" ಎಂದು ಕಂಗನಾ ಗುರುವಾರ ತನ್ನ ಟ್ವೀಟ್ ಮಾಡಿದ್ದರು.

ಅಲ್ಲದೇ ಮತ್ತೊಂದು ಟ್ವೀಟ್​ನಲ್ಲಿ, ಸುಶಾಂತ್​ ಸಿಂಗ್​​ ರಜಪೂತ್ ಸಾವಿನ ಬಳಿಕ ನಾನು ಡ್ರಗ್​ ಹಾಗೂ ಮೂವಿ ಮಾಫಿಯಾ ಬಗ್ಗೆ ದನಿ ಎತ್ತಿದ್ದೆ. ನಾನು ಮುಂಬೈ ಪೊಲೀಸರನ್ನು ನಂಬುವುದಿಲ್ಲ. ಏಕೆಂದರೆ ಅವರು ಸುಶಾಂತ್​ ಸಿಂಗ್​ರ ದೂರುಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ ಎಂದು ಕಂಗನಾ ಹೇಳಿದ್ದರು.

ಇದನ್ನು ಖಂಡಿಸಿರುವ ಸಂಜಯ್ ರಾವತ್ ಕಂಗನಾ ವಿರುದ್ಧ ಕೂಡ ಹೇಳಿಕೆಗಳನ್ನು ನೀಡಿದ್ದು, ಮುಂಬೈ ಹಾಗೂ ಮಹಾರಾಷ್ಟ್ರ ಜನರ ಬಳಿ ಕಂಗನಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details