ಮುಂಬೈ :ಬಾಲಿವುಡ್ ನಟಿ ಕಂಗನಾ ರಣಾವತ್ ಮಂಗಳವಾರ ತಮ್ಮ ಮುಂಬರುವ ಚಲನಚಿತ್ರಗಳಾದ ತಲೈವಿ ಮತ್ತು ಧಾಕಡ್ ಚಿತ್ರಗಳ ನೋಟದಿಂದ ಅಭಿಮಾನಿಗಳ ಮನಸೂರೆಗೊಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಫೊಟೋ ಹಂಚಿಕೊಂಡಿರುವ ಕಂಗನಾ, ತಮ್ಮ ಎರಡು ವಿಭಿನ್ನ ಚಿತ್ರಗಳಿಂದ ಹಿಂದೆಂದೂ ನೋಡಿರದ ಉಡುಗೆಯಲ್ಲಿ ಕಾಣಿಸಿದ್ದಾರೆ. ಚಿತ್ರವೊಂದರಲ್ಲಿ ಅವರು ಕಿರಿಯ ಜಯಲಲಿತಾರ ಹಾಗೆ ಕಾಣಿಸುತ್ತಿದ್ದಾರೆ.
ಎರಡನೇ ಚಿತ್ರದಲ್ಲಿ ಕಂಗನಾ ಕಪ್ಪು ಡೆನಿಮ್ ಶಾರ್ಟ್ಸ್ ಮತ್ತು ಟಾಪ್ ಅನ್ನು ಧರಿಸಿರುವುದನ್ನು ಕಾಣಬಹುದು. ಧಾಕಡ್‌ನಲ್ಲಿನ ಆ್ಯಕ್ಷನ್ ಆಧಾರಿತ ಲುಕ್ ಆಗಿ ಅವರು ಈ ರೀತಿ ಕಾಣಿಸಿದ್ದಾರೆ.
ಜಯಲಲಿತಾ ಪಾತ್ರಕ್ಕಾಗಿ ಅವರು ಸುಮಾರು 20kg ತೂಕ ಹೆಚ್ಚಿಸಿಕೊಂಡಿದ್ದರು. ಇದಾದ ನಂತರ, ಧಾಕಡ್ ಚಿತ್ರೀಕರಣಕ್ಕಾಗಿ ತೂಕ ಕಳೆದುಕೊಂಡರು. ತಲೈವಿ ಮತ್ತು ಧಾಕಡ್ ಹೊರತಾಗಿಯೂ ಕಂಗನಾ ತೇಜಸ್, ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.