ಕಂಗನಾ ರಣಾವತ್ ಮುಂದಿನ ಚಿತ್ರ 'ಧಾಕಡ್'ಗೆ ಫ್ರಾನ್ಸ್ ಮೂಲದ ಜಪಾನಿನ ಛಾಯಾಗ್ರಾಹಕ ಟೆಟ್ಸುವೊ ಹಾಗೂ ನಾಗಾಟಾ ಅವರನ್ನು ನಾವು ಹೊಂದಿದ್ದೇವೆ ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.
ಕ್ವೀನ್ ನಟಿ ತನ್ನ ಇತ್ತೀಚಿನ ಚಿತ್ರದ ಕುರಿತ ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಇದು ಅವರ ಹೊಸ ವರ್ಷದ ಪಾರ್ಟಿಯಲ್ಲಿ 'ಧಾಕಡ್' ತಂಡದೊಂದಿಗಿನ ಕೆಲವು ಚಿತ್ರಗಳನ್ನು ಸಹ ಒಳಗೊಂಡಿದೆ.
ಧಾಕಡ್ಗಾಗಿ ನಾವು ಛಾಯಾಗ್ರಹಣದ ಪ್ರಸಿದ್ಧ ಫ್ರೆಂಚ್ ನಿರ್ದೇಶಕ ಟೆಟ್ಸುವೊ ನಾಗಾಟಾ ಅವರ ನೆರವು ಪಡೆದುಕೊಂಡಿದ್ದೇವೆ. ಅವರ ಲಾ ವೈ ಎನ್ ರೋಸ್ ಅಂತಹ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸೀಸರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕನಾಗಿರುವ ನಾಗತಾ ಅವರು ರಣಾವತ್ ಅಭಿನಯದ ಹೊಸ ಚಿತ್ರದ ಛಾಯಾಗ್ರಹಣ (ಡಿಒಪಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು 'ಧಾಕಡ್' ಚಿತ್ರಕ್ಕೆ ರಜ್ನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳಲಿದ್ದು, ಸೋಹೈಲ್ ಮಕ್ಲೈ ಅವರು ನಿರ್ಮಿಸುತ್ತಿದ್ದಾರೆ.