ಕರ್ನಾಟಕ

karnataka

ETV Bharat / sitara

ತಾಪ್ಸಿ ನಂತರ ಅನುರಾಗ್ ಕಶ್ಯಪ್ ಮೇಲೂ ಮುನಿಸಿಕೊಂಡ್ರಾ ಕಂಗನಾ ರಣಾವತ್​...? - ಅನುರಾಗ್ ಕಶ್ಯಪ್ ಕಂಗನಾ ನಡುವೆ ಮನಸ್ತಾಪ

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ತಾಪ್ಸಿ ನಡುವೆ 2 ವರ್ಷಗಳ ಹಿಂದಿನ ಮನಸ್ತಾಪ ಮತ್ತೆ ಭುಗಿಲೆದ್ದಿದೆ. ಈ ನಡುವೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅನುರಾಗ್ ಕಶ್ಯಪ್ ಮೇಲೆ ಕೂಡಾ ಕಂಗನಾ ಕೋಪಗೊಂಡಿದ್ದಾರೆ ಎನ್ನಲಾಗಿದೆ.

Kangana Ranaut
ಕಂಗನಾ ರಣಾವತ್

By

Published : Jul 23, 2020, 2:32 PM IST

ಕಂಗನಾ ರಣಾವತ್​ ಉತ್ತಮ ನಟಿ ಮಾತ್ರವಲ್ಲ ನೇರ ನುಡಿಯ ವ್ಯಕ್ತಿತ್ವ ಹೊಂದಿದವರು. ಹೇಳಬೇಕೆಂದಿದ್ದನ್ನು ಥಟ್ ಅಂತ ಹೇಳಿಬಿಡುತ್ತಾರೆ. ಉದಾಹರಣೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸ್ವತ: ಕರಣ್ ಜೋಹರ್ ಕೇಳಿದ ಪ್ರಶ್ನೆಯೊಂದಕ್ಕೆ ಅವರೆಡೆಗೆ ಬೆರಳು ಮಾಡಿ ತೋರಿಸಿದ್ದರು ಕಂಗನಾ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಬಾಲಿವುಡ್​​ ಸ್ವಜನ ಪಕ್ಷಪಾತದ ಬಗ್ಗೆ ಕಂಗನಾ ದನಿ ಎತ್ತಿದ್ದರು. ಇದೀಗ ತಾಪ್ಸಿ ಪನ್ನು ಹಾಗೂ ಕಂಗನಾ ರಣಾವತ್ ನಡುವಿನ ಯುದ್ಧದ ಬಗ್ಗೆ ಬಾಲಿವುಡ್​​ನಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ. ಕಂಗನಾ ಹಾಗೂ ತಾಪ್ಸಿ ನಡುವಿನ ಮನಸ್ತಾಪವನ್ನು ಬಗೆಹರಿಸಲು ನಾನು ಇಷ್ಟಪಡುತ್ತೇನೆ. ಆದರೆ ಕಂಗನಾಗೆ ನನ್ನ ಮೇಲೆ ಕೂಡಾ ಕೋಪ ಇದೆ. ರಣಾವತ್ ಅವರೊಂದಿಗೆ ನನಗೆ ಉತ್ತಮವಾದ ಸ್ನೇಹವಿತ್ತು. ಆದರೆ ಕೆಲವು ದಿನಗಳಿಂದ ಇಬ್ಬರ ನಡುವೆ ಸ್ವಲ್ಪ ಮನಸ್ತಾಪವಿದೆ. ಇದನ್ನು ಬಗೆಹರಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, 2018 ರಲ್ಲಿ 'ಮನ್​​ಮರ್ಜಿಯಾನ್' ಚಿತ್ರದ ಪ್ರಮೋಷನ್ ವೇಳೆ ವಾಹಿನಿಯೊಂದರ ಫನ್ ರೌಂಡ್ ಕಾರ್ಯಕ್ರಮದಲ್ಲಿ ತಾಪ್ಸಿ ಪನ್ನು ನೀಡಿದ್ದ ಉತ್ತರದಿಂದ ಕಂಗನಾ ಮನಸ್ಸಿಗೆ ಬಹಳ ನೋವಾಗಿತ್ತು. ಅದಕ್ಕೂ ಮುನ್ನ ಇಬ್ಬರು ಒಳ್ಳೆಯ ನಡುವೆ ಒಳ್ಳೆ ಸ್ನೇಹವಿತ್ತು. ಆದರೆ ಈ ಘಟನೆ ಆದಾಗಿನಿಂದ ಇವರ ನಡುವೆ ಕೂಡಾ ವೈಮನಸ್ಸು ಉಂಟಾಗಿದ್ದು ಅದನ್ನು ಬಗೆಹರಿಸಲು ಕೂಡಾ ನಾನು ಯತ್ನಿಸಿದ್ದೆ ಎಂದು ಅನುರಾಗ್ ಹೇಳಿಕೊಂಡಿದ್ದಾರೆ.

ಆ ದಿನದ ಸಂದರ್ಶನದ ಬಗ್ಗೆ ನಾನು ಕಂಗನಾ ಬಳಿ ಕ್ಷಮೆ ಯಾಚಿಸಲು ಪ್ರಯತ್ನಿಸಿದ್ದೆ. ಆದರೆ ಅಂದಿನಿಂದ ಕಂಗನಾ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮಿಂದ ತಪ್ಪಾಗಿದ್ದರೆ ಸ್ನೇಹಿತರಿಗೆ ಯಾರೇ ಆಗಲಿ ಕ್ಷಮೆ ಕೇಳಲು ಬಯಸುತ್ತಾರೆ. ಆದರೆ 'ನೀನು ನನ್ನೊಂದಿಗೆ ಇಲ್ಲದಿದ್ದರೆ ಅದರರ್ಥ ನೀನು ನನ್ನ ಶತ್ರು' ಎಂಬ ಮನೋಭಾವ ಕಂಗನಾ ರಣಾವತ್​​​​​​​ಗೆ ಇದೆ. ಆದ್ದರಿಂದ ಆಕೆಯನ್ನು ಇದುವರೆಗೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಕಂಗನಾ ಅವರಿಗೆ ತಾವು ಸಹಾಯ ಮಾಡಿದ್ದೆ ಎಂಬ ವಿಚಾರವನ್ನು ಅನುರಾಗ್ ಕಶ್ಯಪ್ ಮಂಗಳವಾರ ತಮ್ಮ ಟ್ವಿಟ್ಟರ್​​ನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ರೀ ಟ್ವೀಟ್ ಮಾಡಿದ್ದ ಕಂಗನಾ ಅಭಿಮಾನಿಗಳು ಅನುರಾಗ್ ಕಶ್ಯಪ್ ಅವರನ್ನು ಮಿನಿ ಮಹೇಶ್ ಭಟ್ ಎಂದು ಹೇಳಿತ್ತು.

ಕಂಗನಾ ಹಾಗೂ ಅನುರಾಗ್ ಕಶ್ಯಪ್ 2013 ರಲ್ಲಿ ಬಿಡುಗಡೆಯಾಗಿದ್ದ 'ಕ್ವೀನ್' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಚಿತ್ರವನ್ನು ವಯಕಾಮ್ 18 ಮೋಷನ್ ಪಿಕ್ಚರ್ಸ್ ಹಾಗೂ ಪ್ಯಾಂಟಮ್ ಫಿಲ್ಮ್ಸ್​​​ ಜೊತೆ ಸೇರಿ ನಿರ್ಮಿಸಿದ್ದವು. ಚಿತ್ರವನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ, ಮಧು ಮಂಥೇನ ಹಾಗೂ ವಿಕಾಸ್ ಭಲ್ ಹಂಚಿಕೆ ಮಾಡಿದ್ದರು.

ABOUT THE AUTHOR

...view details