ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಸಹೋದರಿ ರಂಗೋಲಿ ಚಂದೇಲ್ಗೆ ಮುಂಬೈ ಪೊಲೀಸರು ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಇದಕ್ಕೂ ಮುನ್ನ ನವೆಂಬರ್ 10,11 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಕಂಗನಾ ವಿಚಾರಣೆಗೆ ಹಾಜರಾಗದ ಕಾರಣ ಇದೀಗ ಮತ್ತೆ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಮುಂಬೈ ಪೊಲೀಸರಿಂದ ಕಂಗನಾಗೆ ಮೂರನೇ ಬಾರಿ ಸಮನ್ಸ್ ಜಾರಿ - Kangana Ranaut summoned by Mumbai police
ಎರಡು ಗುಂಪುಗಳ ನಡುವೆ ಕೋಮು ಉದ್ವಿಗ್ನತೆ ಹರಡಲು ಪ್ರೇರಣೆಯಾಗುವಂತೆ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ವಿರುದ್ಧ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದ್ದು ನವೆಂಬರ್ 24 ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಕಂಗನಾಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಕಂಗನಾಗೆ ಸಮನ್ಸ್ ಜಾರಿ ಮಾಡುತ್ತಿರುವುದು ಇದು ಮೂರನೇ ಬಾರಿ.
ಕೆಲವು ದಿನಗಳ ಹಿಂದೆ ಕಂಗನಾ ತಮ್ಮ ಟ್ವಿಟ್ಟರ್ನಲ್ಲಿ ಹಾಕಿದ್ದ ಪೋಸ್ಟ್ವೊಂದು ಕೋಮು ಉದ್ವಿಗ್ನತೆ ಹರಡಲು ಪ್ರಚೋದಿಸುತ್ತದೆ, ಇದರಿಂದ ಸಾಮಾಜಿಕ ದ್ವೇಷವನ್ನು ಹೆಚ್ಚಿಸುತ್ತದೆ. ಈ ಸಂಬಂಧ ಕಂಗನಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಂಗನಾಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಸೋದರ ಸಂಬಂಧಿ ಮದುವೆಯಲ್ಲಿ ಬ್ಯುಸಿ ಇರುವುದರಿಂದ ನವೆಂಬರ್ 15 ವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯ ಇಲ್ಲ ಎಂದು ಕಂಗನಾ ತಿಳಿಸಿದ್ದರು. ಆದ್ದರಿಂದ ಮೂರನೇ ಬಾರಿ ಕಂಗನಾ ಹಾಗೂ ಸಹೋದರಿ ರಂಗೋಲಿ ಚಂದೇಲ್ ಇಬ್ಬರಿಗೂ ಮೂರನೇ ಬಾರಿ ಸಮನ್ಸ್ ಜಾರಿ ಮಾಡಲಾಗಿದೆ. 23 ರಂದು ಕಂಗನಾ ಹಾಗೂ 24 ರಂದು ರಂಗೋಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಇನ್ನಾದರೂ ಕಂಗನಾ ವಿಚಾರಣೆಗೆ ಹಾಜರಾಗಲಿದ್ದಾರಾ ಕಾದು ನೋಡಬೇಕು.