ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಜೀವನ ಚರಿತ್ರೆ 'ತಲೈವಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಕಂಗನಾ 20 ಕಿಲೋ ತೂಕವನ್ನು ಹೆಚ್ಚಿಸಿಕೊಂಡಿದ್ದರಂತೆ.
ಕಳೆದ 7 ತಿಂಗಳಿಂದ ನಾನು ಮತ್ತೆ ಮೊದಲಿನಂತೆ ಆಗಲು ಸೆಣಸಾಡುತ್ತಿದ್ದೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. 'ತಲೈವಿ' ಚಿತ್ರದ ತಮ್ಮ ಲುಕ್ ಹಾಗೂ ಈಗಿನ ಕೆಲವೊಂದು ಫೋಟೋಗಳನ್ನು ಕಂಗನಾ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. "ತಲೈವಿ ಚಿತ್ರಕ್ಕಾಗಿ ನಾನು 20 ಕಿಲೋ ತೂಕ ಹೆಚ್ಚಿಸಿಕೊಂಡಿದ್ದೆ. ಇದರಿಂದ ನನಗೆ ಕೆಲವೊಂದು ಸಮಸ್ಯೆಗಳು ಕಾಡುತ್ತಿವೆ. ಆದರೆ ಒಂದು ಒಳ್ಳೆಯ ಪಾತ್ರಕ್ಕಾಗಿ ಮಾಡಿದ ತ್ಯಾಗದ ಮುಂದೆ ಈ ನೋವು ದೊಡ್ಡದಲ್ಲ" ಎಂದು ಕಂಗನಾ ಬರೆದುಕೊಂಡಿದ್ದಾರೆ.