ಹೈದರಾಬಾದ್:ಬಾಲಿವುಡ್ ನಟಿ ಕಂಗನಾ ರಣಾವತ್ ಜನ್ಮದಿನದಂದು ಅವರ ಬಹುನಿರೀಕ್ಷಿತ ಚಿತ್ರ ತಲೈವಿಯ ಟ್ರೈಲರ್ ರಿಲೀಸ್ ಆಗಿದೆ. ಎ.ಎಲ್.ವಿಜಯ್ ನಿರ್ದೇಶನದ ತಲೈವಿ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನ ಕುರಿತು ತಯಾರಾದ ಸಿನಿಮಾ ಆಗಿದೆ.
ಈ ಟ್ರೇಲರ್ ಮನರಂಜನೆ ಎಂಬ ಉದ್ಯಮದಲ್ಲಿ ಜಯಲಲಿತಾ ಅವರ ಹೋರಾಟಗಳ ಒಂದು ನೋಟವನ್ನು ಹೊರಹಾಕುತ್ತದೆ. ಮತ್ತು ಅತ್ಯಂತ ಪ್ರಬಲ ಮತ್ತು ಅಪ್ರತಿಮ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾಗಲು ಅವರು ನಟಿಯಾಗಿ ಪಟ್ಟ ಹರಸಾಹಸದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.