ಕರ್ನಾಟಕ

karnataka

ETV Bharat / sitara

ಫ್ಯಾನ್​ ಮೇಡ್​ ವಿಡಿಯೋ ಹಂಚಿಕೊಂಡ 'ಕ್ವೀನ್​': ಯಶಸ್ಸಿನ ಹಾದಿ ನೆನೆದ ಕಂಗನಾ - ಕಂಗನಾ ರನೌತ್ ಫ್ಯಾನ್​ ಮೇಡ್​ ವಿಡಿಯೋ

ಕಳೆದ 15 ವರ್ಷಗಳಿಂದ ಕಂಗನಾ ಅವರ ಕಷ್ಟದ, ಸಾಧನೆಯ ವಿಡಿಯೋಗಳನ್ನು ಸೆರೆಹಿಡಿದ ಅಪರಿಚಿತ ಅಭಿಮಾನಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ವಿಡಿಯೋಗೆ ಧನ್ಯವಾದಗಳು ❤️" ಎಂದು ಅವರು ಪೋಸ್ಟ್ ಮಾಡಿದ್ದಾರೆ..

ಫ್ಯಾನ್​ ಮೇಡ್​ ವಿಡಿಯೋ
ಫ್ಯಾನ್​ ಮೇಡ್​ ವಿಡಿಯೋ

By

Published : Jun 27, 2021, 4:13 PM IST

ಹೈದರಾಬಾದ್: ನಟಿ-ನಿರ್ಮಾಪಕಿ ಕಂಗನಾ ರನೌತ್ ಅವರು ಅಭಿಮಾನಿ ನಿರ್ಮಿತ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಂಗನಾ ಅವರ ಸಂದರ್ಶನಗಳು, ಸಾರ್ವಜನಿಕ ಶೋ ಮತ್ತು ಘಟನೆಗಳ ತುಣುಕುಗಳನ್ನು ಒಳಗೊಂಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 2006ರಿಂದ 2021ರವರೆಗಿನ ಅನೇಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿಯ ಸ್ಟೈಲ್​ ಬಗ್ಗೆಯೂ ವಿಡಿಯೋ ಮಾಡಲಾಗಿದೆ.

"ನನ್ನ ಸಹೋದರಿ ರಂಗೋಲಿ ಫ್ಯಾನ್ ಮೇಡ್​ ವಿಡಿಯೋವೊಂದನ್ನು ಕಳುಹಿಸಿದ್ದಾರೆ. ನನಗೆ ನಗು ತರಿಸಿತು. ಚಿತ್ರರಂಗದಲ್ಲಿ ನಾನು ಕೆಲಸ ಮಾಡಲು ಪ್ರಾರಂಭಿಸಿದಾಗ ಚಿಕ್ಕವಳಾಗಿದ್ದೆ. ನಾನು ಶಾಲೆಯಲ್ಲಿ ಓದಬೇಕಾಗಿರುವುದರಿಂದ ನಾನು ತುಂಬಾ ಕಷ್ಟಗಳನ್ನು ಅನುಭವಿಸಿದೆ. ಚಲನಚಿತ್ರೋದ್ಯಮದ ಸರಿಯಾದ ತಿಳುವಳಿಕೆ ಮತ್ತು ಮಾರ್ಗದರ್ಶನವಿಲ್ಲದೆ ವೃತ್ತಿಜೀವನವನ್ನು ಮಾಡಲು ಹೆಣಗಾಡುತ್ತಿದ್ದೆ. ಆದರೆ, 16ನೇ ವಯಸ್ಸಿನಿಂದ ಪ್ರಾರಂಭಿಸಿ, ಒಂದು ದಶಕಕ್ಕೂ ಹೆಚ್ಚು ಕಾಲ ನಾನು ಸಾಧ್ಯವಾದಷ್ಟು ಯಶಸ್ಸನ್ನು ಸಾಧಿಸಿದ್ದೇನೆ. ನನ್ನ ಸ್ವಂತ ಸ್ಟುಡಿಯೋವನ್ನು ನಿರ್ಮಿಸಿ, ಯಶಸ್ವಿ ಚಲನಚಿತ್ರ ನಿರ್ಮಾಪಕಳಾಗಿದ್ದೇನೆ" ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 7 ಮಿಲಿಯನ್ ಫಾಲೋವರ್ಸ್​ಗಳನ್ನು ಕಂಗನಾ ಹೊಂದಿದ್ದಾರೆ. "ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಕೆಟ್ಟದಾಗಿ ಕಾಣುವ ಪ್ರತಿಯೊಂದರಲ್ಲೂ ಒಳ್ಳೆಯತನ ಇರುತ್ತದೆ. ಮೇಲ್ಮೈಯಲ್ಲಿ ಉತ್ತಮವಾಗಿ ಕಾಣುವ ಎಲ್ಲವೂ ಖಂಡಿತವಾಗಿಯೂ ಒಳ್ಳೆಯದಾಗಿರುತ್ತದೆ ಎಂದಲ್ಲ. ಅದರ ಗರ್ಭದಲ್ಲಿ ಕೆಲವು ಕೆಟ್ಟತನವಿರುತ್ತದೆ" ಎಂದು ಬರೆದಿದ್ದಾರೆ.

ಕಳೆದ 15 ವರ್ಷಗಳಿಂದ ಕಂಗನಾ ಅವರ ಕಷ್ಟದ, ಸಾಧನೆಯ ವಿಡಿಯೋಗಳನ್ನು ಸೆರೆಹಿಡಿದ ಅಪರಿಚಿತ ಅಭಿಮಾನಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ವಿಡಿಯೋಗೆ ಧನ್ಯವಾದಗಳು ❤️" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details