ಸೆಲಬ್ರಿಟಿಗಳು ಧರಿಸುವ ಚಪ್ಪಲಿಯಿಂದ ಹಿಡಿದು ಬಟ್ಟೆ, ಹ್ಯಾಂಡ್ಬ್ಯಾಗ್, ಮೊಬೈಲ್ ಪ್ರತಿಯೊಂದು ದುಬಾರಿಯಾಗಿರುತ್ತದೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ 600 ರೂಪಾಯಿ ಬೆಲೆಯ ಸೀರೆ ಧರಿಸುವ ಮೂಲಕ ಟ್ರೋಲ್ಗೆ ಗುರಿಯಾಗಿದ್ದರು. ಆದರೆ ತನ್ನ ಮೇಲಿನ ಟ್ರೋಲ್ಗೆ ಕಂಗನಾ ಸಂತೋಷ ವ್ಯಕ್ತಪಡಿಸಿದ್ದಾರೆ.
600 ರೂಪಾಯಿ ಸೀರೆ ವಿಷಯಕ್ಕೆ ಟ್ರೋಲ್...ಸಂತೋಷ ವ್ಯಕ್ತಪಡಿಸಿದ ಕಂಗನಾ ರಣಾವತ್..!
ಬಾಲಿವುಡ್ ನಟಿ ಕಂಗನಾ ರಣಾವತ್ ತಾವು ಧರಿಸಿದ್ದ 600 ರೂಪಾಯಿ ಸೀರೆ ಬಗ್ಗೆ ಟ್ರೋಲ್ ಆಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ನನ್ನ ಬಗ್ಗೆ ಟ್ರೋಲ್ ಮಾಡಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ಏಕೆಂದರೆ ಜನರು ನನ್ನ ಸೀರೆಯನ್ನು ಗಮನಿಸಿದ್ದಾರೆ ಎಂಬುದೇ ಖುಷಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಂಗನಾ ರಣಾವತ್ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸೀರೆ ಧರಿಸಿ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಂಗನಾ ಸಹೋದರಿ ರಂಗೋಲಿ ಚಂದೇಲ್ ಅವರಿಂದ ಈ ಸೀರೆ ಬೆಲೆ ಕೇವಲ 600 ರೂಪಾಯಿ ಎಂದು ತಿಳಿದುಬಂದಿತ್ತು. ರಂಗೋಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ಫೋಟೋವನ್ನು ಶೇರ್ ಮಾಡಿಕೊಂಡು ಅದರೊಂದಿಗೆ 'ಕಂಗನಾ ಧರಿಸಿರುವುದು 600 ರೂಪಾಯಿ ಬೆಲೆ ಬಾಳುವ ಸೀರೆ. ಜೈಪುರ್ಗೆ ಹೋಗುವ ವೇಳೆ ಕಂಗನಾ ಕೋಲ್ಕತ್ತಾದಲ್ಲಿ ಖರೀದಿಸಿದ ಈ ಸೀರೆಯನ್ನು ಧರಿಸಿದ್ದಾರೆ. ಸೀರೆ ನೇಯುವವರು ಎಷ್ಟು ಶ್ರಮ ಪಡುತ್ತಾರೆ ಎಂದು ನೆನಪಿಸಿಕೊಂಡು ಬಹಳ ಬೇಸರವಾಗುತ್ತದೆ. ಎಲ್ಲರೂ ನಮ್ಮ ದೇಶೀಯ ವಸ್ತುಗಳನ್ನು ಕೊಳ್ಳಬೇಕು. ವಿದೇಶಿ ವಸ್ತುಗಳ ಖರೀದಿ ನಿಲ್ಲಿಸಬೇಕು ಎಂದು ರಂಗೋಲಿ ಟ್ವೀಟ್ ಮಾಡಿದ್ದರು.
ರಂಗೋಲಿ ಟ್ವೀಟ್ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು 'ಆಕೆ ಧರಿಸಿರುವುದು 600 ರೂಪಾಯಿ ಸೀರೆ ಆದರೂ ಆಕೆಯ ಹ್ಯಾಂಡ್ಬ್ಯಾಗ್ ಹಾಗೂ ಕೋಟ್ ಬಹಳ ದುಬಾರಿ ಬೆಲೆಯದ್ದು ಎಂದಿದ್ದರು. ಇದೇ ವಿಷಯಕ್ಕೆ ಕಂಗನಾ ಟ್ರೋಲ್ ಆಗಿದ್ದರು. ಆದರೆ ಇದಕ್ಕೆ ಉತ್ತರಿಸಿರುವ ಕಂಗನಾ 'ಧನ್ಯವಾದಗಳು ಜನರು ನಾನು ಧರಿಸಿರುವ ಸೀರೆಯನ್ನು ಗಮನಿಸಿದ್ದಾರೆ. ಇದಕ್ಕಿಂದ ಸಂತೋಷವಾದ ವಿಷಯ ಬೇರೆ ಇಲ್ಲ' ಎಂದು ಹೇಳುವ ಮೂಲಕ ಟ್ರೋಲ್ ಮಾಡುವವರಿಗೆ ಉತ್ತರ ನೀಡಿದ್ದಾರೆ.