ಮುಂಬೈ (ಮಹಾರಾಷ್ಟ್ರ):ಮುಂಬರುವ ವೆಬ್ ಸರಣಿ "ದಿ ಫ್ಯಾಮಿಲಿ ಮ್ಯಾನ್ 2"ನ ಟ್ರೈಲರ್ನಲ್ಲಿ ದಕ್ಷಿಣದ ತಾರೆ ಸಮಂತಾ ಅಕ್ಕಿನೇನಿ ಅವರನ್ನು ಕಂಗನಾ ರಣಾವತ್ ಹೊಗಳಿದ್ದು, ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ನಿನ್ನೆ ದಿ ಫ್ಯಾಮಿಲಿ ಮ್ಯಾನ್ 2ನ ಟ್ರೈಲರ್ ಬಿಡುಗಡೆಯಾಗಿದೆ. "ಈ ಹುಡುಗಿ ನನ್ನ ಹೃದಯ ಗೆದ್ದಿದ್ದಾಳೆ" ಎಂದು ಸಮಂತಾಳನ್ನು ಒಳಗೊಂಡ ಟ್ರೈಲರ್‌ನ ಸ್ನ್ಯಾಪ್‌ಶಾಟ್ ಹಂಚಿಕೊಳ್ಳುತ್ತಾ ಕಂಗನಾ ಬರೆದಿದ್ದಾರೆ.