ಮುಂಬೈ(ಮಹಾರಾಷ್ಟ್ರ): 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಾತು ಕೇಳಿ ಬರ್ತಿದ್ದು, ಈ ಸಿನಿಮಾ ವೀಕ್ಷಣೆ ಮಾಡಿರುವ ಬಹುತೇಕ ಎಲ್ಲರೂ ಚಿತ್ರತಂಡಕ್ಕೆ ಶಹಬ್ಬಾಸ್ಗಿರಿ ನೀಡಿದ್ದಾರೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರವನ್ನ ಬೆಂಬಲಿಸಿದ್ದಾರೆ.
ಈ ಸಿನಿಮಾ ತೆರೆ ಕಾಣುವ ಮೂಲಕ ಬಾಲಿವುಡ್ ಮಾಡಿರುವ ಎಲ್ಲ ಪಾಪ ಕಳೆದಂತಾಗಿದೆ. ಈ ಸಿನಿಮಾ ನಿರ್ಮಾಣ ಮಾಡಿರುವ ವಿವೇಕ್ ಅಗ್ನಿಹೋತ್ರಿ ಹಾಗೂ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ಜೊತೆಗೆ ಈ ಚಿತ್ರವನ್ನ ಎಲ್ಲರೂ ಬೆಂಬಲಿಸಬೇಕು ಎಂಬ ಮಾತು ಹೇಳಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ಮಾಡಿದ ನಟಿ ಕಂಗನಾ ರಣಾವತ್ ಚಿತ್ರ ವೀಕ್ಷಣೆ ಮಾಡಿದ ಬಳಿಕ ಮಾತನಾಡಿರುವ ಕಂಗನಾ ರಣಾವತ್, ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನ ದೇಶದ ಪ್ರತಿಯೊಬ್ಬರು ಬೆಂಬಲಿಸಬೇಕು. ಇಂತಹ ಚಿತ್ರಗಳು ಹೆಚ್ಚೆಚ್ಚು ತೆರೆ ಕಾಣಬೇಕು ಎಂದಿರುವ ಅವರು, ಪ್ರತಿಯೊಬ್ಬರು ಇದನ್ನ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ:'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ನೀಡಿದ ಮಧ್ಯಪ್ರದೇಶ
ದಿ ಕಾಶ್ಮೀರ್ ಫೈಲ್ಸ್ ಚೆನ್ನಾಗಿ ಮೂಡಿ ಬಂದಿದ್ದು, ಇಂತಹ ಚಿತ್ರಗಳು ಆಸ್ಕರ್ಗೆ ಹೋಗಬೇಕು. ಈ ಚಿತ್ರವನ್ನ ವೀಕ್ಷಣೆ ಮಾಡ್ತಿದ್ದ ವೇಳೆ ನಾನು ನಡುಗುತ್ತಿದೆ ಎಂದಿದ್ದಾರೆ.
ಮಾರ್ಚ್ 11ರಂದು ತೆರೆ ಕಂಡಿರುವ ಈ ಚಿತ್ರ ಈಗಾಗಲೇ 2 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ₹40 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರಕ್ಕೆ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ತೆರಿಗೆ ಸಹ ಘೋಷಣೆ ಮಾಡಿವೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ವಿಷಯವಾಗಿದೆ. ಈ ಚಿತ್ರಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.