ನಟಿ ಕಂಗನಾ ರಣಾವತ್ ಹೈದರಾಬಾದ್ನಲ್ಲಿ ಸಂಜಯ್ ದತ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅರೆ ಇದೇನಪ್ಪಾ ಸಂಜಯ್ ದತ್ ಹೈದರಾಬಾದ್ನಲ್ಲಿದ್ದಾರೆ. ಕಂಗನಾ ರಣಾವತ್ ಅಲ್ಲಿಗೆ ಏಕೆ ಹೋದ್ರು...ಕಂಗನಾ ಏನಾದ್ರೂ ಕೆಜಿಎಫ್ ಚಿತ್ರದಲ್ಲಿ ...,ಖಂಡಿತ ಇಲ್ಲ. ಕಂಗನಾ ಬೇರೆ ಕೆಲಸದ ಮೇಲೆ ಹೈದರಾಬಾದ್ಗೆ ಬಂದಿದ್ದು ಸಂಜಯ್ ದತ್ ಉಳಿದುಕೊಂಡಿರುವ ಹೋಟೆಲ್ಗೆ ಬಂದಿದ್ದಾರೆ. ಅದೇ ಹೋಟೆಲ್ನಲ್ಲಿ ಸಂಜಯ್ ದತ್ ಇದ್ದಾರೆ ಎಂಬ ವಿಚಾರ ತಿಳಿದ ಕಂಗನಾ ರಣಾವತ್, ಕೂಡಲೇ ಅವರ ರೂಮ್ಗೆ ಹೋಗಿ ಆರೋಗ್ಯ ವಿಚಾರಿಸಿದ್ದಾರೆ.
ಹೈದರಾಬಾದ್ನಲ್ಲಿರುವ ಅಧೀರನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಕಂಗನಾ - Kangana Ranaut met Sanjay dutt
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಬಾಕಿ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಯಶ್ ಹೈದರಾಬಾದ್ಗೆ ಬಂದಿದ್ದು. ಸಂಜಯ್ ದತ್ ಕೂಡಾ ಬಾಕಿ ಇರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹೈದರಾಬಾದ್ಗೆ ಬಂದಿಳಿದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ಗಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂಜಯ್ ದತ್ ಈಗ ಬಾಕಿ ಇರುವ ತಮ್ಮ ಭಾಗದ ಚಿತ್ರೀಕರಣ ಮುಗಿಸಲು ಚಿತ್ರತಂಡ ಸೇರಿಕೊಂಡಿದ್ದಾರೆ.

ಕಂಗನಾ ರಣಾವತ್
ಸಂಜಯ್ ದತ್ ಜೊತೆಗೆ ಫೋಟೋ ತೆಗೆಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. "ಸಂಜಯ್ ದತ್ ಹಾಗೂ ನಾನು ಒಂದೇ ಹೋಟೆಲ್ನಲ್ಲಿ ತಂಗಿದ್ದೇವೆ ಎಂದು ತಿಳಿಯುತ್ತಿದ್ದಂತೆ ಸಂಜು ಸರ್ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದೆ. ಅವರನ್ನು ನೋಡುತ್ತಿದ್ದಂತೆ ನನಗೆ ಬಹಳ ಸರ್ಪ್ರೈಸ್ ಆಯ್ತು. ಚಿಕಿತ್ಸೆ ನಂತರ ಬಹಳ ಸೊರಗಿದ್ದ ಅವರು ಈಗ ಮತ್ತೆ ಆರೋಗ್ಯವಾಗಿ ಹಾಗೂ ಬಹಳ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ. ದೇವರು ಅವರಿಗೆ ಧೀರ್ಘಾಯಸ್ಸು ಹಾಗೂ ಹೆಚ್ಚಿನ ಆರೋಗ್ಯ ಕೊಟ್ಟು ಕಾಪಾಡಲಿ" ಎಂದು ಪ್ರಾರ್ಥಿಸಿದ್ದಾರೆ.
Last Updated : Nov 28, 2020, 11:49 AM IST