ನವದೆಹಲಿ: ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‌ಪ್ರೆಸ್ ವೇ ಪ್ರದೇಶದಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ನಿರ್ಧಾರವನ್ನು ನಟಿ ಕಂಗನಾ ರಣಾವತ್ ಶ್ಲಾಘಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಮುಖ್ಯಮಂತ್ರಿಯನ್ನು ಶ್ಲಾಘಿಸಲು ಕಂಗನಾ, ಚಲನಚಿತ್ರೋದ್ಯಮದಲ್ಲಿ ಅನೇಕ ಸುಧಾರಣೆಗಳು ಅಗತ್ಯವಿದೆ ಎಂದು ಹೇಳಿದರು.
"ಯೋಗಿ ಆದಿತ್ಯನಾಥ್ ಅವರ ಈ ಘೋಷಣೆಯನ್ನು ನಾನು ಶ್ಲಾಘಿಸುತ್ತೇನೆ. ಚಿತ್ರರಂಗದಲ್ಲಿ ನಮಗೆ ಅನೇಕ ಸುಧಾರಣೆಗಳು ಬೇಕಾಗುತ್ತವೆ. ಮೊದಲನೆಯದಾಗಿ ನಮಗೆ ಭಾರತೀಯ ಚಲನಚಿತ್ರೋದ್ಯಮ ಎಂಬ ದೊಡ್ಡ ಚಲನಚಿತ್ರೋದ್ಯಮ ಬೇಕು. ಭಾರತದ ಚಲಚಿತ್ರೋದ್ಯಮ ವಿವಿಧ ಆಧಾರದ ಮೇಲೆ ವಿಂಗಡನೆಯಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮೀರತ್ ಮಂಡಳಿ ಅಭಿವೃದ್ಧಿ ಪರಿಶೀಲನೆಯ ಸಂದರ್ಭದಲ್ಲಿ ಆದಿತ್ಯನಾಥ್, ಶೂಟಿಂಗ್ ಉದ್ದೇಶಗಳಿಗಾಗಿ ದೇಶಕ್ಕೆ ಉತ್ತಮ ಫಿಲ್ಮ್ ಸಿಟಿ ಬೇಕಾಗಿದ್ದು, ಉತ್ತರ ಪ್ರದೇಶದ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‌ಪ್ರೆಸ್ ವೇ ಈ ಉದ್ದೇಶಕ್ಕಾಗಿ ಉತ್ತಮ ಸ್ಥಳಗಳಾಗಿವೆ ಎಂದು ಹೇಳಿದರು.
ಫಿಲ್ಸ್ ಸಿಟಿ ಮಾಡುವ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಲಿದೆ ಎಂದು ಅವರು ಹೇಳಿದರು.