ನವದೆಹಲಿ: ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ರಾಜಕೀಯ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರಿಸಿ,ರಾಜಕೀಯಕ್ಕೆ ಸೇರುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದಿದ್ದಾರೆ.
ರಾಜಕೀಯ ಪ್ರವೇಶದ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿದ್ದೇನು..!? - ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶ
ನಾನು ನನ್ನ ಇಷ್ಟದ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದಾಗ ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ಬಿಟೌನ್ ನಟಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ನಾನು ಮೋದಿ ಜೀ ಅವರನ್ನು ಬೆಂಬಲಿಸಿ ರಾಜಕೀಯಕ್ಕೆ ಬರಲು ಯತ್ನಿಸುತ್ತಿರುವುದಾಗಿ ಹೇಳುವವರಿಗೆ ಉತ್ತರ ನೀಡಲು ಬಯಸುವೆ. ನನ್ನ ಅಜ್ಜ ಸತತ 15 ವರ್ಷಗಳಿಂದ ಕಾಂಗ್ರೆಸ್ ಶಾಸಕರಾಗಿದ್ದರು. ನನ್ನ ಕುಟುಂಬ ರಾಜಕೀಯದಲ್ಲಿ ತುಂಬಾ ಜನಪ್ರಿಯವಾಗಿದೆ. ಸಾಕಷ್ಟು ವರ್ಷಗಳಿಂದ ಸಕ್ರಿಯವಾಗಿದೆ. ಗ್ಯಾಂಗ್ಸ್ಟರ್ ಚಿತ್ರದ ಬಳಿಕ ನನಗೆ ಪ್ರತಿವರ್ಷ ರಾಜಕೀಯ ಸೇರಲು ಕಾಂಗ್ರೆಸ್ನಿಂದ ಆಫರ್ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಮಣಿಕರ್ಣಿಕಾ ಚಿತ್ರದ ಬಳಿಕ ಭಾರತೀಯ ಜನತಾ ಪಕ್ಷದ ಟಿಕೆಟ್ ಆಫರ್ ಬಂದಿತ್ತು. ಆದರೆ, ನಾನು ನನ್ನ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಹಾಗೂ ರಾಜಕೀಯಕ್ಕೆ ಪ್ರವೇಶ ನೀಡುವ ಕುರಿತು ನಾನು ಇದುವರೆಗೆ ಯೋಚನೆ ಮಾಡಿಲ್ಲ. ಸ್ವತಂತ್ರ ಚಿಂತಕಳಾಗಿ ನಾನು ನನ್ನ ಇಷ್ಟದ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದಾಗ ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.