ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ತೇಜಸ್ ಸಿನಿಮಾದ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಸರ್ವೇಶ್ ಮೇವಾರಾ ಅವರನ್ನು ಹೊಗಳಿದ್ದಾರೆ. ಸದ್ಯ ತೇಜಸ್ ಸಿನಿಮಾ ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದೆ.
'ತೇಜಸ್' ನಿರ್ದೇಶಕರ ಸಾಧನೆ ಕೊಂಡಾಡಿದ ಕಂಗನಾ - Kangana Ranaut Cases
ಕಂಗನಾ ರಣಾವತ್ ಅಭಿನಯದ ತೇಜಸ್ ಸಿನಿಮಾದ ಚಿತ್ರೀಕರಣ ಮಾ.3ರಿಂದ ಪ್ರಾರಂಭವಾಗಿದೆ. ಈ ವೇಳೆ ಟ್ವೀಟ್ ಮಾಡಿ ಕಂಗನಾ ಶುಭಾಶಯ ತಿಳಿಸಿದ್ದಾರೆ.
"ತೇಜಸ್ ಸಿನಿಮಾದ ಬರಹಗಾರ, ನಿರ್ದೇಶಕರಾದ ಸರ್ವೇಶ್ ಮೇವಾರ ಉತ್ತಮ ಚಿತ್ರವನ್ನು ನೀಡಲು ಸುಮಾರು 1 ದಶಕದಿಂದ ಶ್ರಮ ವಹಿಸುತ್ತಿದ್ದಾರೆ. ನಿನ್ನೆ ಚಿತ್ರೀಕರಣದ ಮೊದಲ ದಿನ. ಅಂದು ಸರ್ವೇಶ್ ತಾಯಿ ಮಗನ ಛಲ ಕಂಡು ಸಂತೋಷ ಪಟ್ಟರು. ಬೆಳ್ಳಿಪರದೆಯ ಮೇಲೆ ಮಗನ ಸಾಧನೆ ಕಾಣುವ ತವಕ ಕಂಡು ನನ್ನ ಕುಟುಂಬ ನನಗೆ ನೆನಪಾಯಿತು" ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರದಂದು ಕಂಗನಾ, ತೇಜಸ್ ಸಿನಿಮಾ ನಿರ್ದೇಶಕರು ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿದ್ದರು. ಈ ವೇಳೆ, ತೆಗೆದುಕೊಂಡ ಭಾವಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. "ಬಹಳ ವಿಶೇಷವಾದ ಭಾನುವಾರ. ನನ್ನ ತೇಜಸ್ ತಂಡದ ಜೊತೆ ಮಾತುಕತೆ ನಡೆಸಿದೆ. ಮುಂಬರುವ ತಿಂಗಳಿನಿಂದ ಇದು ನನ್ನ ಕುಟುಂಬ. ಹ್ಯಾಪಿ ಜರ್ನಿ ಸರ್ವೇಶ್ ಮೇವಾರ" ಎಂದು ಬರೆದಿದ್ದಾರೆ.