ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಇಂದಿನರೆಗೂ ಕಂಗನಾ ರಣಾವತ್ ಬಾಲಿವುಡ್ನಲ್ಲಿ ಸ್ಟಾರ್ ಮಕ್ಕಳ ವಿಚಾರವಾಗಿ ಟ್ವಿಟ್ಟರ್ ವಾರ್ ಮಾಡುತ್ತಿದ್ದು ಸ್ವಜನ ಪಕ್ಷಪಾತದಿಂದ ಎಷ್ಟೋ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದೊಂದು ಪ್ರಯೋಜನವಿಲ್ಲದ ಕಾರ್ಯಕ್ರಮ...KWK ವಿರುದ್ಧ ಕಂಗನಾ ಕಿಡಿ - Sushanth sing suicide case
ಬಾಲಿವುಡ್ ಸ್ವಜನ ಪಕ್ಷಪಾತದ ಬಗ್ಗೆ ಕಂಗನಾ ಅನೇಕ ದಿನಗಳಿಂದ ಮಾತನಾಡುತ್ತಲೇ ಬಂದಿದ್ದಾರೆ. ಇದೀಗ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ಕಂಗನಾ ಕಿಡಿ ಕಾರಿದ್ದಾರೆ.
ಕಂಗನಾ ರಣಾವತ್
'ಬಾಲಿವುಡ್ ಉದ್ಯಮವು ಕಾಫಿ ವಿತ್ ಕರಣ್ ಅಂತಹ ಅಸಮರ್ಥ ಕಾರ್ಯಕ್ರಮಗಳಿಂದಲೇ ತುಂಬಿಹೋಗಿದೆ. ಅಷ್ಟೇ ಅಲ್ಲ ಹಿಂದಿ ಚಿತ್ರರಂಗ ಮಾಫಿಯಾ ನೆರಳಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ' ಎಂದು ಹೇಳುವ ಮೂಲಕ ಮತ್ತೊಮ್ಮೆ ಬಾಲಿವುಡ್ ಸ್ವಜನಪಕ್ಷಪಾತದ ಬಗ್ಗೆ ಕಿಡಿ ಕಾರಿದ್ದಾರೆ. ಒಮ್ಮೆ ಕಂಗನಾ ಕೂಡಾ ಈ ಕಾರ್ಯಕ್ರಮದಲ್ಲಿ ಗೆಸ್ಟ್ ಆಗಿ ಹೋಗಿದ್ದಾಗ ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಅವರೆಡೆಗೆ ಬೊಟ್ಟು ಮಾಡಿ ತೋರಿಸುವ ಮೂಲಕ ತಾನು ಎಂದ ಗಟ್ಟಿಗಿತ್ತಿ, ಧೈರ್ಯವಂತೆ ಎಂಬುದನ್ನು ಸಾಬೀತು ಮಾಡಿದ್ದರು.