ಹೈದರಾಬಾದ್: ಚಿತ್ರ ನಿರ್ಮಾಪಕ ಸುಜೋಯ್ ಘೋಷ್ ಅವರ ಸ್ಲೈಸ್-ಆಫ್-ಲೈಫ್ ಡ್ರಾಮಾ ಉಮಾ ಚಿತ್ರದಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಕೌಟುಂಬಿಕ ಕಥೆಯಾಗಿದ್ದು, ಉಮಾ ಆಗಮನದೊಂದಿಗೆ ಚಿತ್ರವು ಬಹುಮುಖಿ ಪಾತ್ರಗಳ ಮೂಲಕ ತೆರೆದುಕೊಳ್ಳುತ್ತದೆ.
ಬ್ಲಾಕ್‌ಬಸ್ಟರ್ ಚಿತ್ರಗಳಾದ ಸಿಂಗಂ, ಮಗಧೀರ ಮತ್ತು ಮರ್ಸಲ್ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾದ ಅಗರ್‌ವಾಲ್ ಅವರು ಈ ಸಂಬಂಧ ಮಾತನಾಡಿದ್ದು, ಉಮಾ ಜಗತ್ತಿನಲ್ಲಿ ಆಳವಾಗಿ ಅಧ್ಯಯನ ಮಾಡಲು ಉತ್ಸುಕಳಾಗಿದ್ದೇನೆ. ನಾನು ನಟಿಯಾಗಿ ನನಗೆ ಸವಾಲಿನ ಸ್ಕ್ರಿಪ್ಟ್‌ಗಳಿಗೆ ಗ್ರೀನ್ ಸಿಗ್ನಲ್ ನೀಡಲು ಉತ್ಸುಕಳಾಗಿದ್ದೇನೆ. ಉಮಾವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ನಾನು ಸಂತಸ ಪಡುತ್ತೇನೆ ಎಂದು ಹೇಳಿದ್ದಾರೆ.