ಮುಂಬೈ/ಮಹಾರಾಷ್ಟ್ರ: ಬಾಲಿವುಡ್ ತಾರೆ ಜೂಹಿ ಚಾವ್ಲಾ ಕೇಪ್ ಟೌನ್ನ ವರ್ಣರಂಜಿತ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಕೇಪ್ಟೌನ್ನ ವರ್ಣರಂಜಿತ ಬೀದಿಗಳಲ್ಲಿ ಹೆಜ್ಜೆ ಹಾಕಿದ ನಟಿ ಜೂಹಿ ಚಾವ್ಲಾ - ಜೂಹಿ ಚಾವ್ಲಾ ಟ್ವಿಟರ್ ಫೋಟೋ
'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ನಟಿ ಜೂಹಿ ಚಾವ್ಲಾ ಕೇಪ್ ಟೌನ್ನ ವರ್ಣರಂಜಿತ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವರ್ಣರಂಜಿತ ಕರಕುಶಲ ವಸ್ತುಗಳು ಮತ್ತು ಆರ್ಟ್ ಗ್ಯಾಲರಿಯ ಮುಂದೆ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಜನರೆಲ್ಲ ಕೊರೊನಾ ಭೀತಿಯಲ್ಲಿರುವ ಮಧ್ಯೆ ಒಂದು ಪಾಸಿಟಿವ್ ವೈಬ್ ಸೃಷ್ಟಿಸಲು ಜೂಹಿ ಈ ತಮ್ಮ ಕಲರ್ಫುಲ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಗಾಂಧೀಜಿಯವರ ಆರ್ಟ್ ಗ್ಯಾಲರಿ ಇದೆ. ಜೂಹಿ ಚಾವ್ಲಾ ಮಂದಹಾಸ ನೋಡುಗರನ್ನು ಸೆಳೆಯುವಂತಿದೆ. ಸೃಜನಶೀಲತೆ ತುಂಬಿದ ರಸ್ತೆಯಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಜೂಹಿ ಬರೆದುಕೊಂಡಿದ್ದಾರೆ. ಈ ಫೋಟೋಗೆ 1.2ಕೆ ಗಿಂತ ಹೆಚ್ಚು ಜನ ಲೈಕ್ ಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ನಟಿ ಎಲ್ಲೆಲ್ಲೂ ಹಾಗೂ ಎಲ್ಲರಲ್ಲೂ ಬದುಕಿನ ಬಗ್ಗೆ ಪಾಸಿಟಿವಿಟಿ ಹರಡುವ ಮೂಲಕ ಕೊರೊನಾ ಚೈನ್ ಅನ್ನು ಬ್ರೇಕ್ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು