ಬಾಲಿವುಡ್ ನಟಿ ಜೂಹಿ ಚಾವ್ಲಾ ಸಿನಿಮಾ ಸೆಟ್‌ನಲ್ಲಿ ಇತರರೊಂದಿಗೆ ನೃತ್ಯ ಸಂಯೋಜಕಿ - ಚಲನಚಿತ್ರ ನಿರ್ದೇಶಕಿ ಫರಾ ಖಾನ್ರಿಂದ ಹೊಡೆತ ತಿಂದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಜೀ(ZEE) ಕಾಮಿಡಿ ಶೋನ ಸೆಟ್ಗೆ ವಿಶೇಷ ಅತಿಥಿಯಾಗಿ ಆಗಮಿಸಿದ ವೇಳೆ ಜೂಹಿ ಚಾವ್ಲಾ, ಚಿತ್ರದ ಸೆಟ್‌ನಲ್ಲಿ ನಡೆದ ಘಟನೆಯನ್ನು ನೆನೆಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ ಜೂಹಿ ಚಾವ್ಲಾ "ನಾನು ಈ ಹಿಂದೆಯೂ ಜೀ ಕಾಮಿಡಿ ಶೋ ನೋಡಿದ್ದೇನೆ. ಫರಾಹ್ ಜತೆ ನಾವು ಕೆಲಸ ಮಾಡುವಾಗ, ನಾವು ಏಟು ತಿನ್ನುತ್ತಿದ್ದೆವು." ಎಂದು ಹೇಳಿದ್ದಾರೆ.
"ಅವರು ಸೆಟ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ನಾವು ಮಾಡುತ್ತಿರುವುದು ಅವರಿಗೆ ಇಷ್ಟವಾಗದಿದ್ದಾಗ ಇಡೀ ಘಟಕದ ಮುಂದೆ, ಮೈಕ್ ತೆಗೆದುಕೊಂಡು ಕಿರುಚುತ್ತಿದ್ದರು. ನಾವು ಭಯಭೀತರಾಗುತ್ತಿದ್ದೆವು"ಎಂದು ತಿಳಿಸಿದ್ದಾರೆ.
ಜೂಹಿಯವರ ಮಾತಿಗೆ ಪ್ರತಿಕ್ರಿಯಿಸಿದ ಫರಾಹ್ ಖಾನ್ "ಜೂಹಿ ನನಗೆ ತಿಳಿದಿರುವ ಅತ್ಯಂತ ಪ್ರತಿಭಾವಂತ ನಟಿಯರು ಮತ್ತು ನೃತ್ಯಗಾರರಲ್ಲಿ ಒಬ್ಬರು. ನಾನು ಅವರೊಂದಿಗೆ ಬಹಳ ಸಮಯ ಕೆಲಸ ಮಾಡಿದ್ದೇನೆ" ಎಂದು ನೆನಪಿಸಿಕೊಂಡಿದ್ದಾರೆ.
ಓದಿ:ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ಔತಣಕೂಟ ಏರ್ಪಡಿಸಿದ ನಟ ರಾಕೇಶ್ ಬಾಪಟ್