ಬಾಲಿವುಡ್ ತಾರೆ ಅರ್ಜುನ್ ಕಪೂರ್ ಸೋಮವಾರ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸಬಹುದೇ ಎಂದು ಅವರ ಅನುಯಾಯಿಗಳನ್ನು ಕೇಳಿದ್ದಾರೆ. ಚಿತ್ರಗಳ ಜೊತೆಗೆ "ನೀವು ವ್ಯತ್ಯಾಸ ಗುರುತಿಸಬಹುದೇ!!" ಎಂದು ಅರ್ಜುನ್ ಬರೆದಿದ್ದಾರೆ.
ಅರ್ಜುನ್ ಕಪೂರ್ ಶೇರ್ ಮಾಡಿದ ‘ಆ’ ಫೋಟೋಗೆ ಜಾಹ್ನವಿ ಕಪೂರ್ ಹೀಗಂದರು! - ಜಾಹ್ನವಿ ಕಪೂರ್ ಸುದ್ದಿ
ಅರ್ಜುನ್ ಅವರ ಅನೇಕ ಅಭಿಮಾನಿಗಳು ಅವರ ಅಭಿವ್ಯಕ್ತಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಕೊಂಡರೆ, ಅವರ ಸಹೋದರಿ ಜಾಹ್ನವಿ ಕಪೂರ್ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರಗಳ ಹಿಂದಿನ ಕಾಲ್ಪನಿಕ ಪರಿಸ್ಥಿತಿ ವಿವರಿಸಿದ್ದಾರೆ.
ಅರ್ಜುನ್ ಅವರ ಅನೇಕ ಅಭಿಮಾನಿಗಳು ಅವರ ಅಭಿವ್ಯಕ್ತಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಕೊಂಡರೆ, ಅವರ ಸಹೋದರಿ ಜಾಹ್ನವಿ ಕಪೂರ್ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರಗಳ ಹಿಂದಿನ ಕಾಲ್ಪನಿಕ ಪರಿಸ್ಥಿತಿ ವಿವರಿಸಿದ್ದಾರೆ. "ಮೊದಲ ಫೋಟೋ ನೀನು , ಎರಡನೇ ಫೋಟೋ ನಾನು ಊಟದ ಮೇಜಿನ ಮೇಲೆ ಕಥಕ್ ಮಾಡಿ ಮುಗಿಸಿದ್ದೇನೆ ಎಂದು ಭಾವಿಸಿದಾಗಿನದ್ದು, ಎರಡನೇಯ ಫೋಟೋ ನೀನು ಅದನ್ನು ಪುನಃ ಅದನ್ನು ಆರಂಭಿಸಿದಾಗಿನದ್ದು" ಎಂದು ಅರ್ಜುನ್ ಅವರ ಚಿತ್ರಗಳ ಬಗ್ಗೆ ಜಾಹ್ನವಿ ಕಪೂರ್ ಕಾಮೆಂಟ್ ಮಾಡಿದ್ದಾರೆ.
ತಾಯಿ ಶ್ರೀದೇವಿ 2018 ರಲ್ಲಿ ನಿಧನರಾದ ನಂತರ ಅರ್ಜುನ್ ಜಾಹ್ನವಿಯೊಂದಿಗೆ ನಿಕಟ ಸಂಬಂಧ ಬೆಳೆಸಿದ್ದರು. ಅರ್ಜುನ್ ಮತ್ತು ಅವರ ಸಹೋದರಿ ಅನ್ಶುಲಾ ಅವರು ಕಷ್ಟದ ಸಮಯದಲ್ಲಿ ಜಾಹ್ನವಿ ಕಪೂರ್ ಮತ್ತು ಅವರ ಸಹೋದರಿ ಖುಷಿಯೊಂದಿಗೆ ನಿಂತು ತಮ್ಮ ತಂದೆ ಬೋನಿ ಕಪೂರ್‌ಗೆ ಸಹ ಸಹಾಯ ಮಾಡಿದ್ದರು.