ತಿರುಮಲ (ಆಂಧ್ರಪ್ರದೇಶ):ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರ ಹಿರಿಯ ಪುತ್ರಿ ಹಾಗೂ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.
ದಕ್ಷಿಣ ಭಾರತದ ಸೀರೆ ತೊಟ್ಟು ತಿರುಪತಿಗೆ ಭೇಟಿ ನೀಡಿದ 'ಧಡಕ್' ಬೆಡಗಿ ಸಾಂಪ್ರದಾಯಿಕವಾಗಿ ದಕ್ಷಿಣ ಭಾರತದ ಹುಡುಗಿಯರು ಧರಿಸುವ ಲಂಗ ದಾವಣಿ ಉಟ್ಟು ಸ್ನೇಹಿತೆಯೊಂದಿಗೆ ತಿರುಪತಿಗೆ ಬಂದಿದ್ದ ಜಾಹ್ನವಿ, ವೆಂಕಟೇಶ್ವರನ ದರ್ಶನ ಪಡೆದರು. ಬಳಿಕ ರಂಗನಾಯಕುಲು ಮಂಟಪದಲ್ಲಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು.
ಇದನ್ನೂ ಓದಿ: Photos: ಚೆಲುವೆ ಜಾಹ್ನವಿಯ ಮೈಸಿರಿಗೆ ಪಡ್ಡೆಗಳ ದಿಲ್ ಧಡಕ್: ಬ್ರೌನ್ ಲೆಹಂಗಾದಲ್ಲಿ ಶ್ರೀದೇವಿ ತದ್ರೂಪ
ಕಳೆದ ತಿಂಗಳು ತನ್ನ ಗೆಳೆತಿ ನಟಿ ಸಾರಾ ಅಲಿ ಖಾನ್ ಜೊತೆ ಜಾಹ್ನವಿ ಕಪೂರ್ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವರ್ಷ ತೆರೆಕಂಡ 'ರೂಹಿ' ಸಿನಿಮಾದಲ್ಲಿ ಹಾರರ್ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ 'ಧಡಕ್' ಬೆಡಗಿಯ ಮೂರು ಸಿನಿಮಾಗಳು 2022 ರಲ್ಲಿ ತೆರೆಗೆ ಬರಲಿವೆ.