ಮುಂಬೈ:ಬಾಲಿವುಡ್ ನಟಿ ಜಾನ್ವಿ ಕಪೂರ್ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದು, ತನ್ನ ಹುಟ್ಟುಹಬ್ಬದ ದಿನವೂ ಕೆಲಸದಲ್ಲಿ ಬ್ಯುಸಿಯಾಗಿರುವ ನಟಿ ತನ್ನ ಮುಂದಿನ ಚಿತ್ರ ಗುಡ್ ಲಕ್ ಜೆರ್ರಿಗಾಗಿ ಇಂದು ಪಟಿಯಾಲದಲ್ಲಿ ಇಡೀ ದಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹುಟ್ಟ ಹಬ್ಬದಂದು ಕೆಲಸ ಮಾಡಲು ಇಷ್ಟ ಎಂದಿರುವ ಜಾನ್ವಿ "ನಾನು ಈ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ಪಟಿಯಾಲದಲ್ಲಿ ಗುಡ್ ಲಕ್ ಜೆರ್ರಿ ಶೂಟಿಂಗ್ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಅಲ್ಲದೆ ಪ್ರಾಮಾಣಿಕವಾಗಿ, ನಾನು ಯಾವಾಗಲೂ ನನ್ನ ಜನ್ಮದಿನದಂದು ಶೂಟಿಂಗ್ ಮಾಡಲು ಬಯಸುತ್ತೇನೆ. ಹುಟ್ಟು ಹಬ್ಬದಂದು ಸಮಯ ಕಳೆಯಲು ಶೂಟಿಂಗ್ ಸ್ಟಾಟ್ಗಿಂತ ಮತ್ತೊಂದು ಸ್ಥಳ ಬೇಕಿಲ್ಲ ಎಂದಿದ್ದಾರೆ.