ಹೈದರಾಬಾದ್: ಬಾಲಿವುಡ್ ನಟಿ ಜಾನ್ವಿ ಕಪೂರ್, ಕರೀನಾ ಕಪೂರ್ ಅವರ ಸನ್ ಸನಾನಾ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ವಿಶ್ವದ ನೃತ್ಯ ಪ್ರಕಾರಗಳಲ್ಲಿ ಒಂದಾದ ಬೆಲ್ಲಿ ಡ್ಯಾನ್ಸ್ ಅನ್ನು ಜಾನ್ವಿ ಕಲಿಯುತ್ತಿದ್ದು, ಬಿಳಿ ಬಣ್ಣದ ಕ್ರಾಪ್ ಟಾಪ್ ಮತ್ತು ಮ್ಯಾಚಿಂಗ್ ಟ್ರ್ಯಾಕ್ ಪ್ಯಾಂಟ್ ಧರಿಸಿ ಸೊಂಟ ಬಳುಕಿಸುತ್ತಾ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಕಪೂರ್ ಅವರ ನೃತ್ಯ ಕೌಶಲ್ಯಕ್ಕೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಅಭಿಮಾನಿಗಳು ನೃತ್ಯವನ್ನು ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಅವರ ತಾಯಿ ಹಾಗೂ ಬಾಲಿವುಡ್ ನಟಿ ಶ್ರೀದೇವಿ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.