ಹೈದರಾಬಾದ್ :ಚಿತ್ರೀಕರಣದಿಂದ ಕೊಂಚ ಸಮಯ ಬಿಡುವು ಪಡೆದುಕೊಂಡು ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಿಸರ್ಗದ ನಡುವೆ ಸ್ನೇಹಿತರ ಜೊತೆ ಎಂಜಾಯ್ ಮಾಡ್ತಿದ್ದಾರೆ.
ಚಿಟ್ಟೆಗಳನ್ನು ಬೆನ್ನಟ್ಟುವುದು, ಮರಗಳ ಕೆಳಗೆ ಕುಳಿತುಕೊಂಡಿರುವುದು ಹಾಗೂ ನೀರಿನಲ್ಲಿ ಸ್ನಾನ ಮಾಡುವುದು ಸೇರಿದಂತೆ ವಾರಾಂತ್ಯದ ವಿಹಾರದ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಾಹ್ನವಿ ಹಂಚಿಕೊಂಡಿದ್ದಾರೆ.
ನಿಸರ್ಗದ ನಡುವೆ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿರುವ ಜಾಹ್ನವಿ ಕಪೂರ್ ಇದಕ್ಕೆ ಲೆಸ್ ಫ್ಲರ್ಸ್ ಡು ಮಾಲ್ ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಫ್ರೆಂಚ್ ಕವಿತೆಗಳ ಸಂಗ್ರಹವಾಗಿದೆ. ದಿ ಫ್ಲವರ್ಸ್ ಆಫ್ ಇವಿಲ್ ಎಂಬ ಅರ್ಥ ಬರುತ್ತದೆ. ಆದರೆ, ನಟಿ ಎಲ್ಲಿಯೂ ತಾವು ಹೋಗಿರುವ ಸ್ಥಳದ ಕುರಿತಾಗಿ ಮಾಹಿತಿ ನೀಡಿಲ್ಲ.
ವಿಡಿಯೋದಲ್ಲಿ ಜಾಹ್ನವಿ ಬಿಳಿ ಬಣ್ಣದ ಕ್ರಾಪ್ ಟಾಪ್ ಮತ್ತು ನಿಯಾನ್ ಗ್ರೀನ್ ಶಾರ್ಟ್ಸ್ನಲ್ಲಿ ಕಾಣಿಸಿದ್ದಾರೆ. ಇನ್ನು, ನಟಿಯ ಫೋಟೋ ಹಾಗೂ ವಿಡಿಯೋಗಳಿಗೆ ಅಭಿಮಾನಿಗಳು ಫುಲ್ ಪಿಧಾ ಆಗಿದ್ದಾರೆ.
ಸದ್ಯ ಜಾಹ್ನವಿ ಕಪೂರ್ ಅಭಿನಯದ ಗುಡ್ ಲಕ್ ಜೆರ್ರಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದೋಸ್ತಾನ-2 ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬೋನಿ ಕಪೂರ್ರವರು ತನ್ನ ಮಗಳ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.