ಕರ್ನಾಟಕ

karnataka

ETV Bharat / sitara

ತಾಯಿಯಂತೆ ಪ್ರೇಕ್ಷಕರ ಜೊತೆ ಉತ್ತಮ ಒಡನಾಟ ಹೊಂದುತ್ತೇನೆ: ಜಾಹ್ನವಿ ಕಪೂರ್​ - ಗುಡ್ ಲಕ್ ಜೆರ್ರಿ

ನಾನು ಉತ್ತಮ ಅವಕಾಶಗಳನ್ನು ಹುಡುಕುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ತನ್ನ ತಾಯಿಯಂತೆ ಪ್ರೇಕ್ಷಕರ ಜೊತೆ ಒಡನಾಟ ಹೊಂದಬೇಕೆಂದು ಬಯಸುತ್ತೇನೆ ಎಂದು ಜಾಹ್ನವಿ ಕಪೂರ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಜಾಹ್ನವಿ ಕಪೂರ್​
ಜಾಹ್ನವಿ ಕಪೂರ್​

By

Published : Feb 1, 2021, 8:01 PM IST

ಹೈದರಾಬಾದ್: ಬಾಲಿವುಡ್ ನಟಿ ಶ್ರೀದೇವಿ ಅವರ ಮೊದಲ ಮಗಳು ಜಾಹ್ನವಿ ಕಪೂರ್​ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆದರೂ ಸಹ ವೃತ್ತಿ ಜೀವನದಲ್ಲಿ ಮುಂದೆ ಬರುವ ಚಲನಚಿತ್ರಗಳಲ್ಲಿ ಏನು ಬಯಸುತ್ತಾರೆ ಎಂಬುದರ ಕುರಿತು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

2018 ರಲ್ಲಿ 'ಧಡಕ್'​ ಸಿನಿಮಾದ ಮೂಲಕ ಜಾಹ್ನವಿ ಸಿನಿರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕಿತು. ಅಷ್ಟೇ ಅಲ್ಲದೆ 23 ವರ್ಷಕ್ಕೆ ಕೋಟಿ ಕೋಟಿ ಬೆಲೆಬಾಳುವ ಮನೆಯನ್ನು ಖರೀದಿಸಿ ಎಲ್ಲರಿಗೂ ಶಾಕ್​ ನೀಡಿದ್ದಾರೆ.

ಇನ್ನು ತಮ್ಮ ಸಿನಿಮಾ ಜೀವನದ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಜಾಹ್ನವಿ, ಮೊದಲು ಪ್ರೇಕ್ಷಕರನ್ನು ಪ್ರೀತಿಸಬೇಕು. ನಾನು ನನ್ನ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನನಗೆ ಹೊಂದಿಕೆಯಾಗುವ ಪಾತ್ರಗಳನ್ನು ಮಾಡುತ್ತೇನೆ. ನಾನು ಉತ್ತಮ ಅವಕಾಶಗಳನ್ನು ಹುಡುಕುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ತನ್ನ ತಾಯಿಯಂತೆ ಪ್ರೇಕ್ಷಕರ ಜೊತೆ ಒಡನಾಟ ಹೊಂದಬೇಕೆಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಜಾಹ್ನವಿ ಕಪೂರ್ ಅವರ ಮುಂಬರುವ ಚಿತ್ರ 'ಗುಡ್ ಲಕ್ ಜೆರ್ರಿ 'ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣವನ್ನು ಪಂಜಾಬ್​ನಲ್ಲಿ ಪ್ರಾರಂಭಿಲಾಗಿದೆ. ಸಿದ್ಧಾರ್ಥ್ ಸೇನ್‌ಗುಪ್ತಾ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ABOUT THE AUTHOR

...view details