ಕರ್ನಾಟಕ

karnataka

ETV Bharat / sitara

ಪವನ್ ಕಲ್ಯಾಣ್ ಚಿತ್ರದಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಗೇಟ್​ಪಾಸ್​? - Jacqueline Fernandez dropped from Pawan Kalyan film

ಸೆಟ್ಟೇರೋಕು ಮೊದ್ಲೇ ಸೌಂಡ್​ ಮಾಡುತ್ತಿರುವ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರಮಲ್ಲು’ ಚಿತ್ರದಿಂದ ಬಾಲಿವುಡ್​ ನಟಿಯೊಬ್ಬರು ​​ಹೊರ ಬಂದಿದ್ದಾರೆ. ಚಿತ್ರ 2022ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ, ಈ ಬಗ್ಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.

Jacqueline Fernandez OPTED OUT OF PAWAN KALYAN HARI HARA VEERA MALLU
ಪವನ್ ಕಲ್ಯಾಣ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್​

By

Published : Dec 17, 2021, 4:04 PM IST

Updated : Dec 17, 2021, 4:51 PM IST

ಹೈದರಾಬಾದ್​:ಟಾಲಿವುಡ್​ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ 'ಹರಿಹರ ವೀರಮಲ್ಲು' ಚಿತ್ರದಿಂದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಅವರ ಜಾಗಕ್ಕೆ ಮತ್ತೊಬ್ಬ ಹಿಂದಿ ನಟಿ ನರ್ಗೀಸ್ ಫಖ್ರಿ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆಯಂತೆ.

ಜಾಕ್ವೆಲಿನ್ ಫರ್ನಾಂಡೀಸ್

ಕ್ರಿಶ್ ಜಗರ್ಲಮುಡಿ ನಿರ್ದೇಶನದ ಹೊರೆ ಹೊತ್ತಿದ್ದು ಸಿನಿಮಾ ಪಿರಿಯಾಡಿಕ್ ಆ್ಯಕ್ಷನ್ ಥ್ರಿಲ್ಲರ್ ಆಗಿ ತೆರೆಕಾಣಲಿದೆ. ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ತಾರೆಯರಾದ ಅರ್ಜುನ್ ರಾಂಪಾಲ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆ ಚಿತ್ರತಂಡ ತಿಳಿಸಿತ್ತು.

ನಟಿ ನರ್ಗೀಸ್ ಫಖ್ರಿ

ಆದರೆ, ಕಾರಣಾಂತರಗಳಿಂದ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರದಿಂದ ಹೊರನಡೆದಿದ್ದಾರಂತೆ. ಐತಿಹಾಸಿಕ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ‘ವೀರಮಲ್ಲು’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್​ ಆಗಿದ್ದು ಸೆಟ್ಟೇರೋಕು ಮೊದ್ಲೇ ಸಾಕಷ್ಟು ಸೌಂಡ್​ ಮಾಡುವ ಸಿನಿಮಾಗಳ ಪಟ್ಟಿಗೆ ಸೇರಿಕೊಂಡಿದೆ.

ಪವನ್ ಕಲ್ಯಾಣ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್​

ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. AM ರತ್ನ ಎನ್ನುವವರು ಹಣ ಹೂಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 29 ರಂದು ಚಿತ್ರ ಥಿಯೇಟರ್‌ಗೆ ಬರಲಿದೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ಭಾರತದ ಮಾನಸ ವಾರಣಾಸಿ ಸೇರಿ 17 ಮಂದಿಗೆ ಕೋವಿಡ್​ : 'ವಿಶ್ವ ಸುಂದರಿ 2021' ಮುಂದೂಡಿಕೆ

Last Updated : Dec 17, 2021, 4:51 PM IST

ABOUT THE AUTHOR

...view details