ಹೈದರಾಬಾದ್ :ಬಾಲಿವುಡ್ ಆ್ಯಕ್ಷನ್ ಸ್ಟಾರ್ ಟೈಗರ್ ಶ್ರಾಫ್-ನಟಿ ದಿಶಾ ಪಟಾನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ಸಹ ಯಾವುದೇ ಮಾಹಿತಿ ಬಿಚ್ಚಿಟ್ಟಿಲ್ಲ. ಇನ್ನು, ಈ ಸ್ಟಾರ್ಗಳು ತಮ್ಮ ಜನ್ಮದಿನಗಳನ್ನು ಒಟ್ಟಿಗೆ ಆಚರಿಸುವುದರ ಜೊತೆ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬಾಲಿವುಡ್ 'ಜೋಡಿಹಕ್ಕಿ' ಟೈಗರ್-ಪಟಾನಿ ಡೇಟಿಂಗ್ ಬಗ್ಗೆ ಜಾಕಿ ಶ್ರಾಫ್ ಹೀಗಂದ್ರು! - ಟೈಗರ್ ಶ್ರಾಫ್
25ನೇ ವಯಸ್ಸಿನಲ್ಲಿ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಳ್ಳೆಯ ಸ್ನೇಹಿತರು ಮತ್ತು ಅವರ ಭವಿಷ್ಯಕ್ಕಾಗಿ ಅವರು ಏನು ನಿರ್ಧರಿಸಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ..
ಸಲ್ಮಾನ್ ಖಾನ್ ಅವರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ದಿಶಾ ಅವರ ಜೊತೆ ಜಾಕಿ ಶ್ರಾಫ್ ನಟಿಸಿದ್ದರು. ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್. ಇನ್ನು, ಟೈಗರ್ ಮತ್ತು ದಿಶಾ ಅವರ ಸಂಬಂಧದ ಬಗ್ಗೆ ಜಾಕಿ ಶ್ರಾಫ್ ಬಳಿ ಕೇಳಿದಾಗ "ಇದು ಅವರ ಜೀವನ. 25ನೇ ವಯಸ್ಸಿನಲ್ಲಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಳ್ಳೆಯ ಸ್ನೇಹಿತರು ಮತ್ತು ಅವರ ಭವಿಷ್ಯಕ್ಕಾಗಿ ಅವರು ಏನು ನಿರ್ಧರಿಸಿದ್ದಾರೆಂದು ನನಗೆ ತಿಳಿದಿಲ್ಲ. ಟೈಗರ್ ಎಲ್ಲಕ್ಕಿಂತ ಹೆಚ್ಚಾಗಿ ಕೆಲಸದ ಮೇಲೆ ಹೆಚ್ಚು ಗಮನ ವಹಿಸುತ್ತಾನೆ. ಕೆಲಸವು ಅವನ ಮೊದಲ ಪ್ರೀತಿಯಾಗಿದೆ, ಅದನ್ನು ನಾನು ನೋಡಿದ್ದೇನೆ" ಎಂದು ಜಾಕಿ ಹೇಳಿದರು.
ಟೈಗರ್ ಮತ್ತು ದಿಶಾ 'ಭವಿಷ್ಯದಲ್ಲಿ ಮದುವೆಯಾಗಬಹುದು ಅಥವಾ ಸ್ನೇಹಿತರಾಗಿರಬಹುದು' ಎಂದು 2019ರಲ್ಲಿ ಜಾಕಿ ಹೇಳಿದ್ದರು.