ಹೈದ್ರಾಬಾದ್ (ತೆಲಂಗಾಣ): ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ರಾಖಿ ಸಾವಂತ್ ಮಾಡಿದ ಮೋಜು ಮತ್ತು ಫೋಟೋಗೆ ಕೊಟ್ಟಿರುವ ಪೋಸ್ಗಳು ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿವೆ.
ಮುಂಬೈನಲ್ಲಿ ರವಿವಾರ ರಾತ್ರಿ ನಡೆದ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಬ್ಬರೂ ಪಾಲ್ಗೊಂಡಿದ್ದರು. ರಣವೀರ್ ಸಿಂಗ್ ಎಂದಿನಂತೆ ತಮ್ಮ ವಿಭಿನ್ನ ಶೈಲಿಯಲ್ಲಿ ಮಿಂಚುತ್ತಿದ್ದರು. ಇತ್ತ, ರಾಖಿ ಸಾವಂತ್ ತಮ್ಮ ತಲೆ ಮೇಲೆ ದೊಡ್ಡದಾದ ಗುಲಾಬಿ ಮುಡಿದು ಗಮನ ಸೆಳೆದಿದ್ದರು.
ರೆಡ್ ಕಾರ್ಪೆಟ್ ವೇದಿಕೆಯ ವೇದಿಕೆ ಬಂದ ಈ ಜೋಡಿ 'ರಾಮ್ಲೀಲಾ' ಚಿತ್ರದ ತತಡ್ ತತಡ್ ಹಾಡಿನ ಹೂಕ್ ಸ್ಟೆಪ್ ಹಾಕಿದ್ದರು. ಈ ವೇಳೆ, ರಣವೀರ್ ಸಿಂಗ್ರನ್ನು ರಾಖಿ ಸಾವಂತ್ ತಮ್ಮ ಸೊಂಟದ ಮೇಲೆ ಕೂರಿಸಿಕೊಂಡು ಸಾಹಸ ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಸಿಂಡ್ರೇಲಾ; ಕಿರುತೆರೆಯಿಂದ ಹಿರಿತೆರೆಯ ಹೆಜ್ಜೆ ಗುರುತು
ಈ ಕಾರ್ಯಕ್ರಮದಲ್ಲಿ ರಣವೀರ್ ಜನಪ್ರಿಯ ನಟ ಪ್ರಶಸ್ತಿ ಸಹ ಪಡೆದರು. ಈ ಸಮಾರಂಭದಲ್ಲಿ ವಾಣಿ ಕಪೂರ್, ಆಲಿಯಾ ಭಟ್, ಕರಣ್ ಜೋಹರ್, ಹಿನಾ ಖಾನ್, ರಶ್ಮಿ ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.