ಕರ್ನಾಟಕ

karnataka

ETV Bharat / sitara

2 ದಿನಕ್ಕೆ ‘ಇಸ್ಮಾರ್ಟ್​ ಶಂಕರ್​’ @25 ಕೋಟಿ... ಬಾಡಿಗೆ ಚೇರ್​ ಒಯ್ದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು! - ಪ್ರೇಕ್ಷಕರು

ಕನ್ನಡದಲ್ಲಿ ಯುವರಾಜ, ಅಪ್ಪು, ರೋಗ್​ ಚಿತ್ರ ನಿರ್ದೇಶಿಸಿರುವ ಪುರಿ ಜಗನ್ನಾಥ ತೆಲಗು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ. ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಇವರು ಮತ್ತೆ ಹಿಟ್​ ಟ್ರ್ಯಾಕ್​ಗೆ ಮರಳಿದ್ದಾರೆ.

ಬಾಡಿಗೆ ಚೇರ್​ ಒಯ್ದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು

By

Published : Jul 20, 2019, 3:44 PM IST

ಹೌದು, ಪುರಿ ಜಗನ್ನಾಥ ಮತ್ತೆ ಹಿಟ್​ ಟ್ರ್ಯಾಕ್​ಗೆ ಮರಳಿದ್ದಾರೆ. ಪಕ್ಕಾ ತೆಲಂಗಾಣದ ಭಾಷೆಯಲ್ಲಿ ಡೈಲಾಗ್​ ಇರುವ ಚಿತ್ರ ಇಸ್ಮಾರ್ಟ್​ ಶಂಕರ್​. ಪ್ರಪಂಚದಾದ್ಯಂತ ಈ ಚಿತ್ರ ಎರಡೇ ದಿನದಲ್ಲಿ 25ಕ್ಕೂ ಹೆಚ್ಚು ಕೋಟಿ ಬಾಚಿಕೊಂಡಿದೆ. ಅಷ್ಟೇ ಅಲ್ಲ ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ.

ಇಸ್ಮಾರ್ಟ್​ ಶಂಕರ್​ ಚಿತ್ರ ಪ್ರದರ್ಶನ ಕಾಣುತ್ತಿದ್ದ ಥಿಯೇಟರ್​ವೊಂದು ಕಿಕ್ಕಿರಿದು ತುಂಬಿದೆ. ಆದ್ರೂ ಪ್ರೇಕ್ಷಕರು ಬಾಡಿಗೆಯಿಂದ ಕುರ್ಚಿಗಳನ್ನು ಒಯ್ದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಈ ವಿಡಿಯೋವನ್ನು ಚಿತ್ರದ ನಿರ್ಮಾಪಕರಾಗಿರುವ ನಟಿ ಚಾರ್ಮಿ ಟ್ವೀಟ್​ ಮಾಡಿ ಇಸ್ಮಾರ್ಟ್ ಬ್ಲಾಕ್​ಬಸ್ಟರ್ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ರಾಮ್​ ಪೋತನೇನಿ ಜೊತೆ ಕನ್ನಡಿಗರಾದ ನಿಧಿ ಅಗರ್ವಾಲ್​, ನಭಾ ನತೇಶ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ತಲೆಯಲ್ಲಿ ಮತ್ತೊಬ್ಬರ ಮೆಮೊರಿ ಫಿಕ್ಸ್​ ಮಾಡುವ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫುಲ್​ ಫಿದಾ ಆಗಿದ್ದು ಮಾತ್ರ ನಿಜ.

ABOUT THE AUTHOR

...view details