ಕರ್ನಾಟಕ

karnataka

ETV Bharat / sitara

ಸ್ಪರ್ಧೆ ಹಾಗೂ ನೆಪೋಟಿಸಮ್​ನಿಂದ ಒತ್ತಡ ಅನುಭವಿಸಿಲ್ಲ: ಇಶಾನ್ ಖಟ್ಟರ್ ಸ್ಪಷ್ಟನೆ - ನಟ ಇಶಾನ್ ಖಟ್ಟರ್

ಚಲನಚಿತ್ರಗಳಲ್ಲಿ ಅಭಿನಯಿಸುತ್ತಿರುವಾಗ ಸಾಮಾನ್ಯ ಒತ್ತಡಗಳಿರುತ್ತವೆ. ಆದರೆ, ನಾನು ಸ್ಪರ್ಧೆ ಹಾಗೂ ನೆಪೋಟಿಸಮ್​ನಿಂದ ಒತ್ತಡ ಅನುಭವಿಸಿಲ್ಲ ಎಂದು ನಟ ಇಶಾನ್ ಖಟ್ಟರ್ ಹೇಳಿದ್ದಾರೆ.

ishan khatter
ishan khatter

By

Published : Jul 30, 2020, 12:28 PM IST

ಮುಂಬೈ:ಕಠಿಣ ಸ್ಪರ್ಧೆ ಮತ್ತು ನೆಪೋಟಿಸಮ್ ಮಧ್ಯೆ ನಟ ಇಶಾನ್ ಖಟ್ಟರ್ ತಾನು ಯಾವುದೇ ಒತ್ತಡಗಳನ್ನು ಅನುಭವಿಸಿಲ್ಲ ಎಂದು ಹೇಳಿದ್ದಾರೆ.

ಬಾಲಿವುಡ್ ತಾರೆ ಶಾಹೀದ್ ಕಪೂರ್ ಸೋದರ ಸಂಬಂಧಿಯಾಗಿರುವ ಇಶಾನ್ ಈ ಹೇಳಿಕೆ ನೀಡಿದ್ದಾರೆ.

ನಟ ಇಶಾನ್ ಖಟ್ಟರ್

ವಿಕ್ರಮ್ ಸೇಠ್ ಅವರ ಕಾದಂಬರಿ ಆಧಾರಿತ ಮೀರಾ ನಾಯರ್ ಅವರ ಬಿಬಿಸಿ ಸರಣಿ 'ಎ ಸೂಟೇಬಲ್ ಬಾಯ್', ಬಾಲಿವುಡ್ ಆಕ್ಷನ್ ಚಿತ್ರ 'ಖಾಲಿ ಪೀಲಿ' ಮತ್ತು ಇತ್ತೀಚೆಗೆ ಘೋಷಿಸಲಾದ 'ಫೋನ್ ಭೂತ್'ಚಿತ್ರಗಳಲ್ಲಿ ಇಶಾನ್ ಕೆಲಸ ಮಾಡುತ್ತಿದ್ದಾರೆ.

"ಚಲನಚಿತ್ರಗಳಲ್ಲಿ ಅಭಿನಯಿಸುತ್ತಿರುವಾಗ ಸಾಮಾನ್ಯವಾದ ಒತ್ತಡಗಳಿರುತ್ತವೆ. ನಾನು ಅದನ್ನು ನಿಜವಾಗಿಯೂ ಒತ್ತಡವೆಂದು ಗ್ರಹಿಸುವುದಿಲ್ಲ. ಅವಕಾಶಗಳ ಜೊತೆಗೆ ಒತ್ತಡಗಳು ಕೂಡಾ ಬರುತ್ತವೆ" ಎಂದು ಇಶಾನ್ ಹೇಳಿದ್ದಾರೆ.

"ನಾನು ಸ್ಪರ್ಧೆ ಹಾಗೂ ನೆಪೋಟಿಸಮ್​ನಿಂದ ಒತ್ತಡ ಅನುಭವಿಸಿಲ್ಲ, ಬದಲಾಗಿ ಪ್ರೇಕ್ಷಕರು ನನ್ನ ಅಭಿನಯವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುವುದರ ಕುರಿತು ಒತ್ತಡ ಅನುಭಿಸಿದ್ದೇನೆ" ಎಂದು ಇಶಾನ್ ಖಟ್ಟರ್ ಹೇಳಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ನೆಪೋಟಿಸಮ್​ ಬಗ್ಗೆ ಭರ್ಜರಿಯಾಗಿ ಚರ್ಚೆ ನಡೆಯುತ್ತಿರುವಾಗಲೇ ಇಶಾನ್​ ಅವರ ಈ ಹೇಳಿಕೆ ಹೊರ ಬಿದ್ದಿದೆ. ಒಂದು ದೊಡ್ಡ ವರ್ಗ ಬಾಲಿವುಡ್​​ನಲ್ಲಿ ಯುವ ಪ್ರತಿಭೆಗಳನ್ನ ಬೆಳೆಯಲು ಬಿಡೋದಿಲ್ಲ ಎಂಬ ಕೂಗು ಜೋರಾಗುತ್ತಲೇ ಇದೆ. ಈ ಸಂದರ್ಭದಲ್ಲಿ ಇಶಾನ್​ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ.

ABOUT THE AUTHOR

...view details