ಹೈದರಾಬಾದ್ (ತೆಲಂಗಾಣ) :ಬಹುಭಾಷಾ ನಟಿ ಸಮಂತಾ ರುತ್ ಪ್ರಭು ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಟಾಲಿವುಡ್ನಲ್ಲಿ ಹತ್ತು-ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಬ್ಬರೂ ತಮ್ಮ ವಿವಾಹ ವಿಚ್ಛೇದನಕ್ಕೆ ಕಾರಣವೇನು ಎಂಬುದಕ್ಕೆ ಈವರೆಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನಟಿ ಸಮಂತಾ ಅವರ ಕೆಲವು ಕಾರಣಗಳಿಂದ ಇವರಿಬ್ಬರ ಸಂಬಂಧ ಮುರಿದು ಹೋಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರ ಅನ್ನೋದನ್ನು ಅವರ ಆಪ್ತ ಸ್ನೇಹಿತೆಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇದರ ನಡುವೆ ಈಗ ಜಾಲತಾಣದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದೆ.
ಸಮಂತಾ ಮಗುವನ್ನು ಹೊಂದಲು ಇಚ್ಛಿಸದ ಕಾರಣ ಇವರ ಸಂಬಂಧ ಮುರಿದು ಬಿತ್ತು ಅನ್ನೋದು ಸುಳ್ಳು. ಜಾಲತಾಣದಲ್ಲಿ ಹರಿದಾಡುತ್ತಿರುವ ಅವರಿಬ್ಬರ ನಡುವಿನ ವದಂತಿಗಳತ್ತ ಅಭಿಮಾನಿಗಳು ಕಿವಿಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದ ಅವರ ಸ್ನೇಹಿತೆ, ಕುಟುಂಬಕ್ಕಾಗಿ ಸಮಂತಾ ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಬಹಿರಂಗಪಡಿಸಿದ್ದರು.
ಸಮಂತಾ ಕುಟುಂಬದ ಬೆಳವಣಿಗಾಗಿ ತಾವು ಈ ಹಿಂದೆ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಬಗ್ಗೆ ಈಗ ಮತ್ತೆ ಸುದ್ದಿಯಾಗಿದೆ. ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಾಯಕನಾಗಿ ನಟಿಸಬೇಕಿದ್ದ ಲಯನ್ ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ಸಮಂತಾಗೆ ಆಫರ್ವೊಂದು ಹುಡುಕಿಕೊಂಡು ಬಂದಿತ್ತಂತೆ.