ನವದೆಹಲಿ: ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಸಾಕಷ್ಟು ಫ್ಯಾನ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳು. ಇವರ ಬಗೆಗಿನ ಸಣ್ಣ ಸುದ್ದಿಗಳು ಸಖತ್ ವೈರಲ್ ಆಗ್ತವೆ. ಅಂತಹುದೇ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಕೊಹ್ಲಿ ಹಾಗೂ ಸನ್ನಿ ಏರ್ಪೋರ್ಟ್ನಲ್ಲಿ ಜೊತೆಯಾಗಿ ಹೋಗುತ್ತಿದ್ಧಾರೆ ಎಂದು ಇನ್ಸ್ಟಗ್ರಾಂ ಸದಸ್ಯ ಭಯಾನಿ ಎಂಬಾತ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಅದಕ್ಕೆ "For a second I thought how come Mr Kohli is here as he has a match to play," ಎಂಬ ಶೀರ್ಷಿಕೆ ಕೂಡ ನೀಡಿದ್ದ. ಇಷ್ಟಕ್ಕೇನೆ ಈ ವಿಡಿಯೋ ಪೋಸ್ಟ್ ಆದ 3 ಗಂಟೆಗಳಲ್ಲಿ 80,000 ಮಂದಿ ವೀಕ್ಷಿಸಿದ್ದರು.
ವಿಡಿಯೋ ವೀಕ್ಷಿಸಿದ ಮಂದಿಗೆ ಒಂದೇ ಪ್ರಶ್ನೆ, ಸನ್ನಿ ಹಾಗೂ ಕೊಹ್ಲಿ ಜೊತೆಯಾಗಿದ್ದು ಏಕೆ? ಎಂದು. ಆದರೆ ಸೂಕ್ಷ್ಮವಾಗಿ ಗಮನಿಸಿದ ಮಂದಿಗೆ ಗೊತ್ತಾಗಿತ್ತು, ಅದು ಕೊಹ್ಲಿ ಅಲ್ಲ ಎಂದು. ಹೌದು, ಕೊಹ್ಲಿರನ್ನೇ ಹೋಲುವ ಸನ್ನಿಯ ಮ್ಯಾನೇಜರ್ ಸನ್ನಿ ರಾಜನ್ ಏರ್ಪೋರ್ಟ್ನಲ್ಲಿ ಜತೆಯಾಗಿ ಹೋಗುತ್ತಿದ್ದರು. ಸನ್ನಿ ರಾಜನ್ ಸಹ ಈ ವಿಡಿಯೋ ಮತ್ತೆ ಶೇರ್ ಮಾಡಿ ಪ್ರತಿಕ್ರಿಯಿಸಿ "Thanks Viral Bhayani for the compliment" ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.