ಕರ್ನಾಟಕ

karnataka

ETV Bharat / sitara

ಬಡ ಗಾಯಕಿ ರಾನುಗೆ ₹55 ಲಕ್ಷದ ಮನೆ ನೀಡಿದ್ರಾ ಸಲ್ಮಾನ್ ? - ರಾನು ಮಂಡಲ್

ಪಶ್ಚಿಮ ಬಂಗಾಳದ ಬಡ ಕೋಗಿಲೆ ರನು ಮಂಡಲ್ ಅವರಿಗೆ ಸಲ್ಮಾನ್ ಖಾನ್ ಉಡುಗೊರೆಯೊಂದನ್ನು ನೀಡಿದ್ದಾರಂತೆ.

Ranu Mondal

By

Published : Aug 28, 2019, 12:30 PM IST

ಬಡ ಗಾಯಕಿ ರನು ಮಂಡಲ್ ಅವರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರಂತೆ.

ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿರುವ ಗಾಯಕಿ ರಾನು ಮಂಡಲ್​ ಈಗ ದೇಶದ ಸೆನ್ಷೆಷನಲ್ ಸ್ಟಾರ್​. ಇವರ ಸುಮಧುರ ಕಂಠಕ್ಕೆ ಮಾರು ಹೋಗಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ತಮ್ಮ ಸಿನಿಮಾ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಮತ್ತೊಂದು ಸುದ್ದಿ ಕೇಳಿ ಬಂದಿದ್ದು, ರಾನು ಅವರಿಗೆ ₹55 ಲಕ್ಷ ಮೌಲ್ಯದ ಮನೆ ನೀಡಿದ್ದಾರಂತೆ ಸಲ್ಲು ಭಾಯ್.

ಸಲ್ಲು ಉಡುಗೊರೆ ನೀಡಿದ್ದು ನಿಜಾನಾ?

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸುದ್ದಿ ಸುಳ್ಳು ಎಂದಿದ್ದಾರೆ ಸಲ್ಮಾನ್​ಖಾನ್​ ಆಪ್ತರು. ಆಂಗ್ಲ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಅವರು, ರಾನು ಅವರಿಗೆ ಮನೆ ನೀಡಿರುವ ಸುದ್ದಿ ಆಧಾರ ರಹಿತ ಎಂದಿದ್ದಾರೆ.

₹ 7 ಲಕ್ಷ ಸಂಭಾವನೆ ನೀಡಿದ್ದ ಹಿಮೇಶ್ ರೇಶ್ಮಿಯಾ!

ಇನ್ನು ರಾನು ಮಂಡಲ್​ಗೆ ಗಾಯನಕ್ಕೆ ಅವಕಾಶ ನೀಡಿದ್ದ ಹಿಮೇಶ್, ಸಂಭಾವನೆ ರೂಪದಲ್ಲಿ ₹7 ಲಕ್ಷ ನೀಡಿದ್ದಾರೆ. ರಾನು ಅವರ ಹೆಸರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಹಲವು ಕಾರ್ಯಕ್ರಮಗಳಿಗೆ, ಸಿನಿಮಾಗಳಿಗೆ ಹಾಡುವ ಅವಕಾಶಗಳು ಇವರನ್ನು ಅರಸಿಕೊಂಡು ಬರುತ್ತಿವೆಯಂತೆ.

ABOUT THE AUTHOR

...view details