ಹೈದರಾಬಾದ್ (ತೆಲಂಗಾಣ):ಬಾಲಿವುಡ್ನ ಲವ್ಬರ್ಡ್ಸ್ ನಟಿ ಕತ್ರಿನಾ ಕೈಫ್ ಮತ್ತು ನಟಿ ವಿಕ್ಕಿ ಕೌಶಲ್ ತಮ್ಮ ನಡುವಿನ ವಯಸ್ಸಿನ ಅಂತರ ಗೊತ್ತಿದ್ದರೂ ಅದನ್ನು ಮುರಿದು ಮದುವೆ ಮಾಡಿಕೊಳ್ಳುತ್ತಿರುವ ಬಗ್ಗೆ ನಟಿ - ನಿರ್ಮಾಪಕಿ ಕಂಗನಾ ರಣಾವತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅಜ್ಜ ನೆಟ್ಟ ಆಲದ ಮರ ಇದೆ ಅಂತ ಅದಕ್ಕೆ ಉರುಳು ಹಾಕಿಕೊಳ್ಳೋದು ಎಷ್ಟು ಸರಿ? ಎಂಬ ಅರ್ಥದಲ್ಲಿ ಕಂಗನಾ, ಅವರ ಹೆಸರನ್ನು ಬಳಸಿಕೊಳ್ಳದೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಬಗ್ಗೆ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕಂಗನಾ ಇವರ ಬಗ್ಗೆ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಜೋಡಿ ನಾಳೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಹಸೆಮಣೆ ಏರಲಿದ್ದು, ಅದಕ್ಕಾಗಿ ಭಾರಿ ಸಿದ್ಧತೆ ನಡೆದಿದೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರುವುದು ನೋಡಿ ಖುಷಿ ಆಗುತ್ತದೆ ಎಂದು ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಜೋಡಿಯ ಹೆಸರನ್ನು ಎತ್ತಿಕೊಳ್ಳದೇ ಬರೆದುಕೊಂಡಿದ್ದಾರೆ.
ಕಂಗನಾ ರನಾವತ್ ಇನ್ಸ್ಟಾಗ್ರಾಮ್ ಕತ್ರಿನಾ ಕೈಫ್ (38) ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ವಿಕ್ಕಿ ಕೌಶಲ್ (33) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಹಿಳೆ ತನಗಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವುದನ್ನು ನಾವು ಇಷ್ಟು ದಿನಗಳ ಕಾಲ ನೋಡಿದ್ದೇವೆ. ಆದರೆ, ಈ ಜೋಡಿ ಇದನ್ನು ಮುರಿದು ಮದುವೆಯಾಗುತ್ತಿದೆ. ಭಾರತೀಯ ಚಲನಚಿತ್ರೋದ್ಯಮದ ಮಹಿಳೆಯರು ಈ ಚೌಕಟ್ಟು ದಾಟಿ ಹೊರಬಂದಿರುವುದನ್ನು ನೋಡಿ ಖುಷಿಯಾಗುತ್ತಿದೆ. ಇಬ್ಬರಿಗೂ ಅಭಿನಂದನೆಗಳು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಂಗನಾ ರನಾವತ್ ಮತ್ತು ಬಾಲಿವುಡ್ನ ಲವ್ಬರ್ಡ್ಸ್ ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ ಬಚ್ಚನ್, ಸೋಹಾ ಅಲಿ ಖಾನ್, ನೇಹಾ ಧೂಪಿಯಾ ಮತ್ತು ಬಿಪಾಶಾ ಬಸು ಸೇರಿದಂತೆ ಹಲವರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗಿದ್ದು ಅವರ ಪಟ್ಟಿಯಲ್ಲಿ ಈಗ ಕತ್ರಿನಾ ಕೈಫ್ ಕೂಡ ಸೇರಿದ್ದಾರೆ.
ಇದನ್ನೂ ಓದಿ: ವಂಚನೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್