ಕರ್ನಾಟಕ

karnataka

ETV Bharat / sitara

ಸೂರ್ಯವಂಶಿಗೆ ಕ್ಯಾಟ್ ಫೈಟ್... ಅಕ್ಷಯ್ ಆಸೆಗೆ ರೋಹಿತ್ ಶೆಟ್ಟಿ ತಣ್ಣೀರು? ​ - ತೀಸ್ ಮಾರ್ ಖಾನ್

ನಟ ಅಕ್ಷಯ್ ಕುಮಾರ್ ಹಾಗೂ ನಟಿ ಕತ್ರಿನಾ ಕೈಫ್ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ತೀಸ್ ಮಾರ್ ಖಾನ್​ (2010) ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿದ್ದ ಕೊನೆಯ ಚಿತ್ರ. ಇದೀಗ ಸೂರ್ಯವಂಶಿ ಚಿತ್ರದಲ್ಲಿ ಮತ್ತೆ ಒಟ್ಟಾಗಿ ಸ್ಕ್ರೀನ್ ಶೇರ್ ಮಾಡುವುದು ಅಕ್ಷಯ್​ ಆಸೆ. ಆದರೆ, ಇದು ನಿರ್ದೇಶಕ ರೋಹಿತ್​ ಶೆಟ್ಟಿಗೆ ಇಷ್ಟವಿಲ್ಲವಂತೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Mar 28, 2019, 10:15 AM IST

ನಟ ಅಕ್ಷಯ್​ ಕುಮಾರ್​​ ಸೂರ್ಯವಂಶಿ ಚಿತ್ರದಲ್ಲಿ ನಟಿಸುತ್ತಿರುವುದು, ಈ ಚಿತ್ರಕ್ಕೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್​ ಹೇಳುತ್ತಿರುವುದು ಮೊನ್ನೆಯಷ್ಟೇ ರಿವೀಲ್ ಆಗಿತ್ತು.

ಶೆಟ್ಟಿ ಮತ್ತೊಮ್ಮೆ ತೆರೆಯ ಮೇಲೆ ಸೂಪರ್ ಕಾಪ್​ಗಳ ( ಪೊಲೀಸರ) ಕಥೆ ಹೇಳಲು ಹೊರಟಿದ್ದು, ಬಾಲಿವುಡ್ ಮಂದಿಗೆ ಖುಷಿ ನೀಡಿದೆ. ಅದರಲ್ಲೂ ಈ ಚಿತ್ರದಲ್ಲಿ ಕಿಲಾಡಿ ಅಕ್ಕಿ ಎಟಿಎಸ್​ (ಆ್ಯಂಟಿ ಟೆರರಿಸ್ಟ್​ ಸ್ಕ್ವಾಡ್​ ) ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ಹೀರೋಯಿನ್​ ಆಗಿ ಬಾಲಿವುಡ್ ಕ್ಯಾಟ್ ಕತ್ರಿನಾ ಕೈಫ್​ ಅಕ್ಷಯ್ ಜತೆ ಡ್ಯುಯೆಟ್ ಹಾಡಲಿದ್ದಾರೆ. ಒಂಭತ್ತು ವರ್ಷಗಳ ಬಳಿಕ ತೆರೆಮೇಲೆ ರೊಮ್ಯಾನ್ಸ್​ಗೆ ಈ ಜೋಡಿ ಮತ್ತೆ ಜತೆಯಾಗುತ್ತಿದೆ. ಈ ಚಿತ್ರಕ್ಕೆ ಕ್ಯಾಟ್ ಆಯ್ಕೆ ಹಿಂದೆ ಅಕ್ಕಿಯ ವಿಶೇಷ ಆಸಕ್ತಿ ಇದೆ ಎಂದು ಗುಲ್ಲೆಬ್ಬಿತ್ತು. ಆದರೆ, ಕತ್ರಿನಾ ಆಯ್ಕೆ ಬಗ್ಗೆ ಚಿತ್ರತಂಡದಿಂದ ಯಾವುದೇ ಖಚಿತತೆ ಇಲ್ಲ.

ವೆಲ್​​-ಕಮ್​, ಸಿಂಗ್​ ಇಸ್ ಕಿಂಗ್ ಹಾಗೂ ತೀಸ್​ ಮಾರ್​ ಖಾನ್ ಚಿತ್ರಗಳಲ್ಲಿ ಅಕ್ಷಯ್​-ಕತ್ರಿನಾ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ಇದೇ ಕಾರಣಕ್ಕೆ ಸೂರ್ಯವಂಶಿಗೆ ಕತ್ರಿನಾಳನ್ನೇ ಹಾಕಿಕೊಳ್ಳವುದು ಅಕ್ಷಯ್ ಕುಮಾರ್ ಅವರ ಬಯಕೆ. ಆದರೆ, ಇದು ರೋಹಿತ್ ಶೆಟ್ಟಿಗೆ ಇಷ್ಟವಿಲ್ಲವಂತೆ. ಕತ್ರಿನಾ ಅವರು ನನ್ನ ಸಿನಿಮಾ ಪಾತ್ರಕ್ಕೆ ಸೂಟ್ ಆಗೋಲ್ಲ. ಹಾಗಾಗಿ ಬೇರೆ ನಟಿಯರನ್ನು ಹುಡುಕೋಣ ಎನ್ನುತ್ತಿದ್ದಾರಂತೆ ಶೆಟ್ಟಿ. ಇದೇ ಕಾರಣಕ್ಕೆ ಅವರು ಬೇರೆ ನಟಿಯರತ್ತ ಕಣ್ಣು ಹಾಯಿಸಿದ್ದು, ಅದಕ್ಕಾಗಿ ತಲಾಶ್ ನಡೆಸಿದ್ದಾರಂತೆ.

ABOUT THE AUTHOR

...view details