ಕರ್ನಾಟಕ

karnataka

ETV Bharat / sitara

ಈ ಫೋಟೋ ನೋಡಿದವರಿಗೆ ಒಂದೇ ಪ್ರಶ್ನೆ... ತವಕದಲ್ಲಿ ಐಶ್ ಅಭಿಮಾನಿಗಳು - undefined

ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯ ರೈ ಬಚ್ಚನ್​ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಳುಕುವ ಬಳ್ಳಿ. ಮಗಳು ಆರಾಧ್ಯ ಎದೆ ಎತ್ತರಕ್ಕೆ ಬೆಳೆದರೂ ಮಾಗದ ಮೈಮಾಟಿನ ಈ ಚೆಲುವೆ ಇದೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನೋದು ಅಭಿಮಾನಿಗಳ ಪ್ರಶ್ನೆ.

ಗೋವಾ ಬೀಚ್​ನಲ್ಲಿ ಐಶ್​

By

Published : Mar 22, 2019, 6:44 PM IST

ಈ ಎಲ್ಲ ಪ್ರಶ್ನೆಗಳಿಗೆ ಈ ಒಂದು ಫೋಟೋ ಉತ್ತರ ನೀಡುತ್ತಿದೆ. ಐಶ್ವರ್ಯ ರೈ ಬಚ್ಚನ್​ ಇದೀಗ ಪತಿ ಅಭಿಷೇಕ್​ ಬಚ್ಚನ್​ ಜೊತೆಗೆ ಗೋವಾದ ಬೀಚ್​​​ವೊಂದರಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ವೈರಲ್​ ಆಗಿದೆ.

ನಟಿ ಐಶ್ವರ್ಯ ರೈ

ಅಲ್ಲದೆ ಈ ಫೋಟೋ ನೋಡಿದ ಅಭಿಮಾನಿಗಳೆಲ್ಲ ಐಶು ಮತ್ತೇ ಪ್ರಗ್ನೆಂಟ್​ ಆದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲೂ ಕಾರಣವು ಇದೆ..

ಗೋವಾ ಬೀಚ್​ನಲ್ಲಿ ಐಶ್​

ನಿನ್ನೆ ಸೆಲಬ್ರಿಟಿಗಳೆಲ್ಲ ಮುಂಬೈನಲ್ಲಿ ರಂಗಿನಾಟ ಆಡಿದರು. ಆದರೆ, ಐಶ್​ ತಮ್ಮ ಪತಿ ಜತೆ ಗೋವಾ ಕಡಲ ತೀರದಲ್ಲಿ ಹೋಳಿ ಆಚರಿಸಿದರು. ಈ ವೇಳೆ ಅವರ ಫೋಟೋ ಒಂದು ಈಗ ಹೊಸ ಸುದ್ದಿಯೊಂದನ್ನ ಹೊತ್ತು ತಂದಿದೆ. ಅಭಿ ಜತೆ ಕಡಲ ತಡಿಯಲ್ಲಿ ವಾಕ್ ಮಾಡುತ್ತಿರುವ ಐಶ್​, ಕೊಂಚ ದಪ್ಪ ಆದಂತಿದೆ. ಅವರು ಬೇಬಿ ಬಂಪ್​ ಸ್ಪಷ್ಟವಾಗಿ ಫೋಟೋದಲ್ಲಿ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನೆಟ್ಟಿಜನ್​ಗಳೆಲ್ಲ ಕುತೂಹಲ ಭರಿತ ಪ್ರಶ್ನೆಗಳನ್ನು ಐಶ್​ನತ್ತ ತೂರುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details