ನವದೆಹಲಿ : ತಂದೆ ನಿಧನರಾದಾಗ ನಮ್ಮ ಕುಟುಂಬದ ಸಹಾಯಕ್ಕೆ ಬಂದವರಲ್ಲಿ ನಟ ಸಂಜಯ್ ದತ್ ಮೊದಲಿಗರು ಎಂದು ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ, ದತ್ ಅವರಿಗೆ ತಮ್ಮ ಆರೋಗ್ಯ ಯುದ್ಧದಲ್ಲಿ ಒಬ್ಬಂಟಿಯಾಗಿ ಹೋರಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಸಂಜಯ್ ದತ್ ಅವರಿಗೆ ಕುಟುಂಬದೊಂದಿಗೆ ಇರಲು ಅವಕಾಶ ಕೊಡಿ: ಇರ್ಫಾನ್ ಖಾನ್ ಪುತ್ರ - ಸಂಜಯ್ ದತ್ ಇರ್ಫಾನ್ ಖಾನ್ ಸ್ನೇಹ
ಸಂಜಯ್ ದತ್ಗೆ ತಮ್ಮ ಆರೋಗ್ಯ ಯುದ್ಧದಲ್ಲಿ ಒಬ್ಬಂಟಿಯಾಗಿ ಹೋರಾಡಲು ಅವಕಾಶ ಮಾಡಿಕೊಡಿ ಎಂದು ದಿ.ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಮನವಿ ಮಾಡಿದ್ದಾರೆ.
ಬಾಬಿಲ್ ಖಾನ್ ಇನ್ಸ್ಟಾಗ್ರಾಂ ಪೋಸ್ಟ್
ಈ ಕುರಿತು ಇನ್ಸ್ಟಾಗ್ರಾಂ ಪೋಸ್ಟ್ ಹಾಕಿರುವ ಬಾಬಲ್ ಖಾನ್, 2018ರಲ್ಲಿ ನಮ್ಮ ತಂದೆಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಎಲ್ಲ ರೀತಿಯಲ್ಲೂ ಸಹಾಯ ಮಾಡಿದವರಲ್ಲಿ ಅವರೂ ಕೂಡ ಒಬ್ಬರು. ಬಾಬಾ (ತಂದೆ) ನಿಧನರಾದ ಬಳಿಕ ದತ್ ನಮ್ಮ ಬೆನ್ನಿಗೆ ನಿಂತರು ಎಂದು ಬರೆದುಕೊಂಡಿದ್ದಾರೆ.
ಸಂಜಯ್ ದತ್ ಆರೋಗ್ಯ ಕುರಿತು ಹಲವು ಊಹಾಪೋಹಗಳು ಸೃಷ್ಟಿಯಾದ ಬಗ್ಗೆ ಬಾಬಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೆಲಸ ನನಗೆ ಗೊತ್ತಿದೆ. ಆದರೂ, ಮಾನವೀಯ ನೆಲೆಯಲ್ಲಿ ಸಂಜು ಭಾಯ್ ಅವರಿಗೆ ಅವರ ಆರೋಗ್ಯ ವಿಚಾರವಾಗಿ ಹೋರಾಡಲು ಅವಕಾಶ ಕೊಡಿ. ತೊಂದರೆ ಕೊಡಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದಾರೆ.