ಕರ್ನಾಟಕ

karnataka

ETV Bharat / sitara

ರೋಗಿಗಳನ್ನ ಬದುಕಿಸಲು ಪ್ರಾಣ ಪಣಕ್ಕಿಡುವ ದಾದಿಯರಿಗೆ ಅಭಿಷೇಕ್ ಬಚ್ಚನ್ ಸೆಲ್ಯೂಟ್​ - ಅಂತಾರಾಷ್ಟ್ರೀಯ ದಾದಿಯರ ದಿನ,

ದಾದಿಯರು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯಿಂದ ದೀರ್ಘಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ರೋಗಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ..

International Nurses Day
International Nurses Day

By

Published : May 12, 2021, 6:22 PM IST

ಮುಂಬೈ :ಅಂತಾರಾಷ್ಟ್ರೀಯ ದಾದಿಯರ ದಿನದಂದು ನಟ ಅಭಿಷೇಕ್ ಬಚ್ಚನ್ ಅವರು ದಾದಿಯರಿಗೆ ಶುಭ ಹಾರೈಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಶುಶ್ರೂಷಾ ಸಮುದಾಯದ ಸತತ ಪ್ರಯತ್ನಗಳಿಗೆ ಅಭಿನಂದಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಬಚ್ಚನ್​ ಹೇಳಿದ್ದಾರೆ.

ದಾದಿಯರಿಗೆ ಶುಭಹಾರೈಸಿದ ಅಭಿಷೇಕ್ ಬಚ್ಚನ್

"ದಾದಿಯರು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯಿಂದ ದೀರ್ಘಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ರೋಗಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.

ಈ ಅಂತಾರಾಷ್ಟ್ರೀಯ ದಾದಿಯರ ದಿನದಂದು ನಾನು ಕೋವಿಡ್-19 ವಿರುದ್ಧ ಹೋರಾಡಲು ಅವರ ಪ್ರಯತ್ನಗಳಿಗೆ ಮತ್ತು ಅವರ ಅವಿರತ ಶ್ರಮಕ್ಕೆ ನಮಸ್ಕರಿಸುತ್ತೇನೆ" ಎಂದು ಬರೆದಿದ್ದಾರೆ.

ABOUT THE AUTHOR

...view details