ಮುಂಬೈ (ಮಹಾರಾಷ್ಟ್ರ): ನಟಿ ಮಲೈಕಾ ಅರೋರಾ ಅವರ ಸಹೋದರಿ ಅಮೃತಾ ಅರೋರಾ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಬಾಲಿವುಡ್ನ ಗರ್ಲ್ ಗ್ಯಾಂಗ್ ಶುಭಾಶಯ ತಿಳಿಸಿದೆ. ಕರೀನಾ ಕಪೂರ್ ಖಾನ್ ಮತ್ತು ಅವರ ಗರ್ಲ್ ಗ್ಯಾಂಗ್ ನಿನ್ನೆ ರಾತ್ರಿಯೇ ಕೇಕ್ ಕಟ್ ಮಾಡಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: 60 ಅಂತಸ್ತಿನ ಕಟ್ಟಡದಿಂದ ಬಿದ್ದು Miss USA-2019 ನಿಧನ: ಕಂಬನಿ ಮಿಡಿದ ಹರ್ನಾಜ್ ಸಂಧು
ಕರೀನಾ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದೊಡ್ಡ ಕೇಕ್ ಜೊತೆಗೆ ಚಿಕ್ಕದಾಗಿ ನಡೆದ ಪಾರ್ಟಿಯಲ್ಲಿ ಅಮೃತಾ ಅವರನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು. ಮಲೈಕಾ ಅವರು ಪಾರ್ಟಿ ಕ್ಯಾಪ್ ಧರಿಸಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಮಲೈಕಾ ಅವರ ಆಪ್ತ ಮೇಕಪ್ ಕಲಾವಿದೆ ಮಲ್ಲಿಕಾ ಭಟ್ ಅವರನ್ನೂ ಫೋಟೋದಲ್ಲಿ ಕಾಣಬಹುದು.