ಹೈದರಾಬಾದ್:ಫ್ರಾನ್ಸ್‌ನಲ್ಲಿ ನಡೆಯಲಿರುವ ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ವಿಭಾಗದಲ್ಲಿ ಪ್ರದರ್ಶಿಸಲು ಎರಡು ಚಿತ್ರಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಮರಾಠಿ ಚಿತ್ರ 'ಮಾಯಿ ಘಾಟ್' ಮತ್ತು ಗುಜರಾತಿ ಚಿತ್ರ 'ಹೆಲ್ಲಾರೊ' ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
'ಮಾಯಿ ಘಾಟ್' ಮರಾಠಿ ಚಲನಚಿತ್ರವನ್ನು ಅನಂತ್ ಮಹಾದೇವನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉಷಾ ಜಾಧವ್, ಸುಹಾಸಿನಿ ಮುಲೆ, ಕಮಲೇಶ್ ಸಾವಂತ್, ಗಿರೀಶ್ ಓಕ್, ಮಿಲಿಂದ್ ಶಿಂಧೆ, ಗಣೇಶ್ ಯಾದವ್, ವಿಶಾವರಿ ದೇಶಪಾಂಡೆ, ವಿವೇಕ್ ಚಬುಕಸ್ವರ್ ಮತ್ತು ಹರ್ಷದ್ ಶಿಂಧೆ ಮುಖ್ಯ ಪಾತ್ರದಲ್ಲಿದ್ದಾರೆ.
'ಮಾಯಿ ಘಾಟ್' ಮರಾಠಿ ಚಲನಚಿತ್ರ 'ಹೆಲ್ಲಾರೊ' ಗುಜರಾತಿ ಚಲನಚಿತ್ರವನ್ನು ಅಭಿಷೇಕ್ ಷಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಕಳೆದ ವರ್ಷ ಅತ್ಯುತ್ತಮ ಪ್ರಾದೇಶಿಕ ಚಿತ್ರರಂಗ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ.
'ಹೆಲ್ಲಾರೊ' ಗುಜರಾತಿ ಚಲನಚಿತ್ರ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ 73ನೇ ಕ್ಯಾನ್ ಚಲನಚಿತ್ರೋತ್ಸವ ಈ ವರ್ಷದ ಆರಂಭದಲ್ಲಿಯೇ ಮುಂದೂಡಲಾಗಿತ್ತು. ಆದರೆ ಈ ಚಲನಚಿತ್ರೋತ್ಸವ ಐದು ದಿನಗಳವರೆಗೆ ವರ್ಚುವಲ್ ರೂಪದಲ್ಲಿ ನಡೆಸುವುದಾಗಿ ಸಂಘಟಕರು ಘೋಷಿಸಿದ್ದಾರೆ.