ಮುಂಬೈ:ಕೊರೊನಾ ಸೋಂಕು ದೇಶಾದ್ಯಂತ ಭೀತಿ ಸೃಷ್ಟಿಸಿದ್ದು ಪ್ರತಿಯೊಬ್ಬರೂ ಮನೆಯಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಿಸಿದೆ. ಇದಕ್ಕೆ ಬಾಲಿವುಡ್ ಸ್ಟಾರ್ಗಳೂ ಕೂಡ ಹೊರತಾಗಿಲ್ಲ.
ಕತ್ರಿನಾ ಕೈಫ್ ಸೆಲ್ಫ್ ಐಸೋಲೇಷನ್: ಕಸ ಗುಡಿಸಿ ಕಾಲ ಕಳೆದ ಕ್ಯಾಟ್ - ಕತ್ರಿನಾ ಕೈಫ್ ಹೋಮ್ ಕ್ವಾರಂಟೈನ್
ಸದಾ ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಿದ್ದ ಕ್ಯಾಟ್, ಕೊರೊನಾ ಸೋಂಕು ಹರಡುವಿಕೆ ಕಾರಣ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಕಸ ಗೂಡಿಸಿ ಕಾಲ ಕಳೆದ ಕ್ಯಾಟ್
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಕೂಡ ಮನೆಯಲ್ಲೇ ಕಾಲ ಕಳೀತಿದ್ದಾರೆ. ಸದಾ ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಿದ್ದ ಈ ನಟಿ ಈಗ ಮನೆ ಕೆಲಸ ಮಾಡಿಕೊಂಡು ಹಾಯಾಗಿದ್ದಾರೆ.
ದೇಶಾದ್ಯಂತ 21 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ 21 ದಿನಗಳ ಕಾಲ ಮನೆಯಲ್ಲೆ ಇರುವಂತೆ ಕ್ಯಾಟ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಮನೆಯಲ್ಲಿ ಕಸ ಗುಡಿಸುವ ವಿಡಿಯೋವನ್ನು ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಇದು ಕೂಡ ಉತ್ತಮ ವ್ಯಾಯಾಮ ಅನ್ನೋದು ಅವರ ಮಾತು.