ನವದೆಹಲಿ:ರಜೆಯ ಮಜಾ ಅನುಭವಿಸಲು ಮಾಲ್ಡೀವ್ಸ್‌ಗೆ (Maldives) ತೆರಳಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachhan), ಪತ್ನಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan)ಮತ್ತು ಮಗಳು ಆರಾಧ್ಯ (Aaradhya) ಅಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ವಿಹಾರಕ್ಕೆಂದೇ ಮಾಲ್ಡೀವ್ಸ್‌ಗೆ ಹಾರಿರುವ ಬಚ್ಚನ್ ಕುಟುಂಬ (Bachchan Family) ಅಲ್ಲಿ ತಾವು ಕಂಡ ನಿಸರ್ಗ ಸೌಂದರ್ಯವನ್ನು ವಿವರಣೆಯೊಂದಿಗೆ ಅವರ ಪ್ರತ್ಯೇಕ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೀಲಿ ಸಾಗರದ ಮೇಲಿರುವ ಎರಡು ಈಜುಕೊಳಗಳ ಚಿತ್ರವನ್ನು ನಟಿ ಐಶ್ವರ್ಯಾ ರೈ (Aishwarya Rai Bachchan) ಹಂಚಿಕೊಂಡರೆ, ಪತಿ ಅಭಿಷೇಕ್ (Abhishek Bachchan) ಸಾಗರಕ್ಕೆ ಎದುರಾಗಿರುವ ಒಂದು ರೆಸಾರ್ಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮಗಳ ಜೊತೆ ದಂಪತಿಯು ಮೊನ್ನೆ (ಶನಿವಾರ) ಮುಂಬೈನ ವಿಮಾನ ನಿಲ್ದಾಣ (Mumbai Airport) ದಲ್ಲಿ ಕಾಣಿಸಿಕೊಂಡಿದ್ದರು. ಬಚ್ಚನ್ ಕುಟುಂಬದ ಫೋಟೋಗಳನ್ನು ನೋಡಿದ ನೆಟಿಜನ್ಸ್ ತಮ್ಮ ಪುಟ್ಟ ಮಗುವಿನೊಂದಿಗೆ ಅವರು ಎಲ್ಲಿಗೆ ಹೊರಟಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.
ಇನ್ನು ಇತ್ತೀಚೆಗೆ ಎಲ್ 'ಓರಿಯಲ್ ರನ್ವೇ ಶೋನ 50ನೇ ವಾರ್ಷಿಕೋತ್ಸವದ ನಿಮಿತ್ತ ಈ ದಂಪತಿ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಕಾಣಿಸಿಕೊಂಡಿತ್ತು. ಮಗಳು ಆರಾಧ್ಯ ಕೂಡ ಈ ವೇಳೆ ಇದ್ದರು.