ಹೈದರಾಬಾದ್: ನಟಿ-ನೃತ್ಯಗಾರ್ತಿ ನೋರಾ ಫತೇಹಿ, ಟಿ-ಸೀರೀಸ್ ನಿರ್ಮಿಸುತ್ತಿರುವ ಸಾಚೆಟ್ ಟಂಡನ್ ಮತ್ತು ಪರಂಪರಾ ಠಾಕೂರ್ ಅವರ ಹೊಸ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಹಾಡಿನ ಚಿತ್ರೀಕರಣದ ಕುರಿತು ಮಾಹಿತಿ ಹಂಚಿಕೊಂಡ ನೋರಾ, ಚಿತ್ರೀಕರಣದ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ನಿದ್ರೆಯಿಂದ ವಂಚಿತಳಾಗಿದ್ದೆ ಎಂದು ಹೇಳಿದ್ದಾರೆ.
ಚೋರ್ ಡೆಂಗೆ ಚಿತ್ರೀಕರಣದ ನೃತ್ಯಕ್ಕಾಗಿ ನೋರಾ 40 ದಿನಗಳ ಕಠಿಣ ಅಭ್ಯಾಸ ಮಾಡಿದ್ದು, ರಜಿತ್ ದೇವ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ನೋರಾ, ತಾನು ಸರಿಯಾದ ನಿದ್ರೆ ಪಡೆಯದೆ ನಾಲ್ಕು ದಿನಗಳ ಕಾಲ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನದಾದ್ಯಂತ ಚೋರ್ ಡೆಂಗೆ ಚಿತ್ರೀಕರಣ ಮಾಡಲಾಗಿದ್ದು, ಮ್ಯೂಸಿಕ್ ವಿಡಿಯೋವನ್ನು ಅರವಿಂದರ್ ಖೈರಾ ನಿರ್ದೇಶಿಸಿದ್ದಾರೆ.