ಕರ್ನಾಟಕ

karnataka

ETV Bharat / sitara

ನಿರ್ದೇಶಕ ಅನುರಾಗ್ ಕಶ್ಯಪ್ ಪರ ನಟಿ ತಾಪ್ಸಿ ಪನ್ನು ಬ್ಯಾಟಿಂಗ್​​​​ - ಬಾಲಿವುಡ್ ಮಿ ಟೂ ಪ್ರಕರಣ

ಅನುರಾಗ್ ಕಶ್ಯಪ್ 5 ವರ್ಷಗಳ ಹಿಂದೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ಪಾಯಲ್ ಘೋಷ್ ಇತ್ತೀಚೆಗೆ ಆರೋಪ ಮಾಡಿದ್ದರು. ಪಾಯಲ್ ಘೋಷ್ ಆರೋಪ ಸುಳ್ಳು ಎಂದಿರುವ ತಾಪ್ಸಿ ಪನ್ನು ಅನುರಾಗ್​​​​​​​​ ಕಶ್ಯಪ್ ಬೆಂಬಲಕ್ಕೆ ನಿಂತಿದ್ದಾರೆ.

taapsee pannu supports anurag kashyap
ತಾಪ್ಸಿ ಪನ್ನು

By

Published : Sep 23, 2020, 1:31 PM IST

ಮುಂಬೈ: ಬಾಲಿವುಡ್​​​ನಲ್ಲಿ ಒಂದೆಡೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಮತ್ತೊಂದೆಡೆ ಡ್ರಗ್ಸ್ ದಂಧೆ ತನಿಖೆ ನಡೆಯುತ್ತಿದೆ. ಇದೀಗ 2 ವರ್ಷಗಳ ಹಿಂದೆ ಭಾರೀ ಸದ್ದು ಮಾಡಿದ್ದ ಮಿ ಟೂ ಮತ್ತೆ ತಲೆಯೆತ್ತಿದೆ. ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್​​​​ ಕಶ್ಯಪ್ ಮೇಲೆ ಮಿ ಟೂ ಆರೋಪ ಮಾಡಿದ್ದಾರೆ.

ಪಾಯಲ್ ಘೋಷ್​​​ಗೆ ಕಂಗನಾ ರಣಾವತ್ ಬೆಂಬಲ ನೀಡುತ್ತಿದ್ದರೆ, ಅನುರಾಗ್ ಕಶ್ಯಪ್​​​​ ಬೆಂಬಲಕ್ಕೆ ತಾಪ್ಸಿ ಪನ್ನು ನಿಂತಿದ್ದಾರೆ. 2018 ರಲ್ಲಿ ಬಿಡುಗಡೆಯಾದ 'ಮನ್​ಮರ್ಜಿಯಾನ್' ಚಿತ್ರದಿಂದ ತಾಪ್ಸಿ ಹಾಗೂ ಅನುರಾಗ್ ಕಶ್ಯಪ್ ಒಳ್ಳೆಯ ಸ್ನೇಹಿತರಾಗಿದ್ದು ಅಂದಿನಿಂದ ಇಂದಿನವರೆಗೂ ತಾಪ್ಸಿ ಹಾಗೂ ಕಶ್ಯಪ್ ಇಬ್ಬರೂ ಏನೇ ಕಷ್ಟಗಳಿದ್ದರೂ ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾ ಬಂದಿದ್ದಾರೆ. ಇದೀಗ ತಾಪ್ಸಿ ಮತ್ತೆ ಅನುರಾಗ್ ಕಶ್ಯಪ್ ಪರ ನಿಂತಿದ್ದಾರೆ.

ತಮ್ಮ ಇನ್ಸ್​​ಟಾಗ್ರಾಮ್​ನಲ್ಲಿ ಅನುರಾಗ್ ಕಶ್ಯಪ್ ಅವರನ್ನು ಬೆಂಬಲಿಸಿರುವ ತಾಪ್ಸಿ, 'ಅನುರಾಗ್ ಕಶ್ಯಪ್​ ದೊಡ್ಡ ಸ್ತ್ರೀವಾದಿ' ಎಂದು ಬರೆದಿದ್ದಾರೆ. ತಾಪ್ಸಿ ಅವರ ಈ ಪೋಸ್ಟ್​​​ಗೆ ಅನುರಾಗ್ ಕಶ್ಯಪ್ ಜೊತೆ ಕೆಲಸ ಮಾಡಿದ ಅನೇಕ ನಟಿಯರು ಬೆಂಬಲಿಸಿದ್ದಾರೆ. 'ಕಶ್ಯಪ್ ಬಹಳ ಮುಗ್ಧರು. ಶೂಟಿಂಗ್ ಸೆಟ್​ನಲ್ಲಿ ಅವರೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬ ಮಹಿಳೆಯೂ ಅವರ ಒಳ್ಳೆಯತನದ ಬಗ್ಗೆ ಹೇಳುತ್ತಾರೆ' ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಹೇಳಿದ್ದಾರೆ.

'ಅನುರಾಗ್ ಕಶ್ಯಪ್ ಅವರಿಂದ ಯಾರಾದರೂ ಕಿರುಕುಳಕ್ಕೆ ಒಳಗಾಗಿದ್ದಲ್ಲಿ ಅವರು ದೂರು ನೀಡಲಿ, ವಿಚಾರಣೆ ನಡೆದರೆ ಸತ್ಯ ಏನೆಂಬುದು ಹೊರಗೆ ಬರುತ್ತದೆ. ಒಂದು ವೇಳೆ ಅವರು ತಪ್ಪು ಮಾಡಿದ್ದಾರೆ ಎಂದಾದಲ್ಲಿ ಎಲ್ಲರಿಗಿಂತ ಮೊದಲು ಅವರಿಂದ ದೂರಾಗುವವರಲ್ಲಿ ನಾನು ಮೊದಲಿಗಳು' ಎಂದು ತಾಪ್ಸಿ ಹೇಳಿದ್ದಾರೆ. ಅಷ್ಟೇ ಅಲ್ಲ 'ಕೆಲವರು ಮಿ ಟೂ ಚಳವಳಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ' ಎಂದು ಕೂಡಾ ತಾಪ್ಸಿ ಬೇಸರ ವ್ಯಕ್ತಪಡಿಸಿದರು.

ತಾಪ್ಸಿ ಒಬ್ಬರು ಮಾತ್ರವಲ್ಲ ಅನುರಾಗ್ ಕಶ್ಯಪ್ ಜೊತೆ ಕೆಲಸ ಮಾಡಿದ ರಾಧಿಕಾ ಆಪ್ಟೆ, ಮಹಿ ಗಿಲ್, ಹುಮಾ ಖುರೇಷಿ, ಟಿಸ್ಕಾ ಛೋಪ್ರಾ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅನುರಾಗ್ ಕಶ್ಯಪ್ ಮಾಜಿ ಪತ್ನಿಯರಾದ ಆರತಿ ಬಜಾಜ್ ಹಾಗೂ ಕಲ್ಕಿ ಕೊಚ್ಲಿನ್ ಕೂಡಾ ಅನುರಾಗ್ ಕಶ್ಯಪ್ ಪರ ನಿಂತಿದ್ದಾರೆ.

ABOUT THE AUTHOR

...view details