ಮುಂಬೈ:ಸೈಫ್ ಅಲಿ ಖಾನ ಪುತ್ರ ಇಬ್ರಾಹಿಂ ಅಲಿ ಖಾನ್ ಬಾಲವುಡ್ ಎಂಟ್ರಿಗೆ ಕೊನೆಗೂ ವೇದಿಕೆ ಸಿದ್ಧವಾಗಿದೆ. ಆದರೆ, ನಟನಾಗಿ ಬಾಲಿವುಡ್ಗೆ ಎಂಟ್ರಿ ಪಡೆಯದೇ ಸಹಾಯಕ ನಿರ್ದೇಶಕನಾಗಿ ಬಾಲಿವುಡ್ನ ಕದ ತಟ್ಟಲಿದ್ದಾರೆ.
ಕರಣ್ ಜೋಹರ್ ಜೊತೆ ಸಹ ನಿರ್ದೇಶಕನಾಗಿ ಸೈಫ್ ಅಲಿ ಖಾನ್ ಪುತ್ರ ಬಾಲಿವುಡ್ಗೆ ಎಂಟ್ರಿ - ಸಾರಾ ಅಲಿ ಖಾನ್
ಬಾಲಿವುಡ್ ನಟ ಸೈಫ್ ಪುತ್ರ ಸಹಾಯಕ ನಿರ್ದೇಶಕನಾಗಿ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಪಡೆಯಲಿದ್ದಾರೆ. ನಿರ್ದೇಶಕ ಕರಣ್ ಜೋಹರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಇಬ್ರಾಹಿಂ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆಯೂ ಇಬ್ರಾಹಿಂ ಬಾಲಿವುಡ್ನಲ್ಲಿ ಎಂಟ್ರಿ ಪಡೆಯುವ ಕುರಿತು ಸುದ್ದಿಗಳು ಹರಿದಾಡಿದ್ದವು. ಆದರೆ, ನಟನಾಗಿ ತೆರೆ ಮೇಲೆ ಬರಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಬಳಿಕ ಧರ್ಮಾ ಪ್ರೊಡಕ್ಷನ್ ಹೌಸ್ ಆಫೀಸ್ನಲ್ಲಿ ಕಾಣಿಸಿಕೊಂಡು ಸದ್ಯದಲ್ಲೇ ಬಾಲಿವುಡ್ ಆಗಮನದ ಸುಳಿವು ನೀಡಿದ್ದರು. ಇದೀಗ ನಿರ್ದೇಶಕ ಕರಣ್ ಜೋಹರ್ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಹಿಂದಿ ಸಿನಿಮಾ ಹೌಸ್ನ ಸದಸ್ಯರಾಗಲಿದ್ದಾರೆ.
ಇದಕ್ಕೂ ಮೊದಲು ಸೈಫ್ ಅಲಿ ಖಾನ್ ಮಗಳಾದ ಸಾರಾ ಅಲಿ ಖಾನ್ 2018ರಲ್ಲಿ ಬಾಲಿವುಡ್ನಲ್ಲಿ ನಾಯಕಿಯಾಗಿ ತೆರೆ ಮೇಲೆ ಬಂದಿದ್ದರು. ಇದೀಗ ಮಗ ಇಬ್ರಾಹಿಂ ತೆರೆ ಹಿಂದಿನ ಕೆಲಸದಲ್ಲಿ ತೊಡಗಲು ಮುಂದಾಗಿದ್ದಾರೆ.