ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ದಂಪತಿ ಪುತ್ರಿ ಆರಾಧ್ಯ ರೈ ಬಚ್ಚನ್ ಇಂದು 9ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಗಳೊಂದಿಗೆ ಇರುವ ಫೋಟೋವನ್ನು ಐಶ್ವರ್ಯ ರೈ ಹಂಚಿಕೊಂಡು ಪುತ್ರಿಗೆ ಪ್ರೀತಿಪೂರ್ವಕ ಶುಭಾಶಯ ಕೋರಿದ್ದಾರೆ.
ಮಗಳಿಗೆ ಪ್ರೀತಿಪೂರ್ವಕ ಬರ್ತ್ಡೇ ಶುಭ ಕೋರಿದ ಐಶ್ವರ್ಯ ರೈ ಬಚ್ಚನ್ - Amitabh bachchan Grand daughter Birthday
ಅಮಿತಾಬ್ ಬಚ್ಚನ್ ಮೊಮ್ಮಗಳು ಆರಾಧ್ಯ ಇಂದು 9ನೇ ವಸಂತಕ್ಕೆ ಕಾಲಿರಿಸಿದ್ದು, ಐಶ್ವರ್ಯ ತಮ್ಮ ಮುದ್ದಿನ ಮಗಳಿಗೆ ಪ್ರೀತಿಯ ಶುಭ ಕೋರಿದ್ದಾರೆ. ಐಶ್ವರ್ಯ ಅಭಿಮಾನಿಗಳು ಕೂಡಾ ಆರಾಧ್ಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
''ನನ್ನ ಪ್ರೀತಿಯ ದೇವತೆ ಆರಾಧ್ಯಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಕೊನೆ ಕ್ಷಣದವರೆಗೂ ನೀನೇ ನನ್ನ ಉಸಿರು. ದೇವರು ನಿನಗೆ ಒಳ್ಳೆಯದು ಮಾಡಲಿ, ಐ ಲವ್ ಯು'' ಎಂದು ಬರೆದುಕೊಂಡಿದ್ದಾರೆ. ಈ ಬಾರಿ ಕೊರೊನಾ ಭೀತಿಯಿಂದ ಐಶ್ವರ್ಯ ರೈ , ತಮ್ಮ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲೇ ಆಚರಿಸಿದ್ದಾರೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಕೂಡಾ ಆರಾಧ್ಯಗೆ ಬರ್ತಡೇ ಶುಭ ಕೋರಿದ್ದಾರೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ 20 ಏಪ್ರಿಲ್ 2007 ರಂದು ಮದುವೆಯಾದರು. ಈ ದಂಪತಿಗೆ 2011 ನವೆಂಬರ್ 17 ರಂದು ಜನಿಸಿದ ಮಗುವಿಗೆ ಆರಾಧ್ಯ ಎಂದು ಹೆಸರಿಟ್ಟರು. ಆರಾಧ್ಯ, ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಬಾಲಿವುಡ್ ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳು ಆರಾಧ್ಯ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.