ಮುಂಬೈ:ಬಾಲಿವುಡ್ನಲ್ಲಿ ಲಾಬಿಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ನಟಿ ರವೀನಾ ಟಂಡನ್, ಅಲ್ಲಿನ ಕೊಳಕು ರಾಜಕೀಯದಿಂದ ನನಗೆ ಕೆಲವು ಕೆಟ್ಟ ಅನುಭವಗಳಾಗಿವೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
90ರ ದಶಕದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ರವೀನಾ ಟಂಡನ್ (45), ಬಾಲಿವುಡ್ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಾವುದೇ ಹೀರೋ ಜತೆ ಮಲಗಿಲ್ಲ. ಅಫೇರ್ ಇಟ್ಟುಕೊಂಡಿರಲಿಲ್ಲ ಎಂದಿದ್ದಾರೆ. ನನಗೆ ಯಾವುದೇ ಗಾಡ್‌ಫಾದರ್ ಇಲ್ಲ. ಬಾಲಿವುಡ್ನಲ್ಲಿ ಯಾವುದೇ ಹೀರೋ ನನ್ನನ್ನು ಪ್ರಮೋಟ್ ಮಾಡಿಲ್ಲ ಎಂದು ಸ್ವಾಭಿಮಾನ ವ್ಯಕ್ತಪಡಿಸಿದ್ದಾರೆ.