ಕರ್ನಾಟಕ

karnataka

ETV Bharat / sitara

'ಆ ಒಂದೇ ಒಂದು ಕಾರಣಕ್ಕಾಗಿ 30 ಸಿನಿಮಾ ಕಳೆದುಕೊಂಡೆ' - ಪ್ರೇಮ್

ಕನ್ನಡದ 'ಪ್ರೀತಿ ಯಾಕೆ ಭೂಮಿ ಮೇಲಿದೆ' ಚಿತ್ರದ ಐಟಂ ಸಾಂಗ್​ನಲ್ಲಿ ಪ್ರೇಮ್ ಜತೆ ಸೊಂಟ ಬಳುಕಿಸಿದ್ದ ನಟಿ ಮಲ್ಲಿಕಾ ಶರಾವತ್​, ಚಿತ್ರರಂಗದಲ್ಲಿ ತಮಗೆ ಎದುರಾದ ಸಂಕಷ್ಟ ಬಿಚ್ಚಿಟ್ಟಿದ್ದಾರೆ.

ಚಿತ್ರಕೃಪೆ: ಇನ್​​ಸ್ಟಾಗ್ರಾಂ

By

Published : Jun 29, 2019, 1:54 PM IST

ಬಾಲಿವುಡ್, ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಶರಾವತ್ ತಮಗೆ ಬಂದ ಅವಕಾಶಗಳು ಹೇಗೆ ಕೈ ತಪ್ಪಿದವು ಎಂಬುದನ್ನು ಬೇಸರದಿಂದ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದ ನೋವು ಹೊರಹಾಕಿರುವ ಈ ಬೋಲ್ಡ್ ಬೆಡಗಿ, ದೊಡ್ಡ ಸ್ಟಾರ್​ ನಟರ ಚಿತ್ರಗಳಿಗೆ ನಾಯಕಿಯಾಗುವ ಅವಕಾಶಗಳು ಬಂದಿದ್ದವು. ಆದರೆ, ಬಾಲಿವುಡ್​ನ ಕೆಲ ಬಿಗ್​ ತಾರೆಯರು ತುಂಬಾ ಸ್ವಾರ್ಥಿಗಳು. ತಮ್ಮ ಗರ್ಲ್​ಫ್ರೆಂಡ್ಸ್​​ಗೆ ಅವಕಾಶ ಕೊಟ್ಟು,ನನ್ನನ್ನು ಚಿತ್ರದಿಂದ ಹೊರಹಾಕಿದರು. ನಾನು ಅವರ ಸ್ನೇಹಿತೆಯಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ 30 ಕ್ಕೂ ಹೆಚ್ಚು ಚಿತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಆ ನಟರೆಲ್ಲ ಸ್ಟುಪಿಡ್​ಗಳು ಎಂದು ಕೋಪದಿಂದ ನುಡಿದಿದ್ದಾರೆ ಮಲ್ಲಿಕಾ.

ಕೆಲ ನಟಿಯರ ಮೇಲೂ ಹರಿಹಾಯ್ದಿರುವ ಮಲ್ಲಿಕಾ, ಈ ದೌರ್ಜನ್ಯದ ವಿರುದ್ಧ ನಾನು ಧ್ವನಿ ಎತ್ತಿದೆ. ಆದರೆ, ಯಾವ ನಟಿಯರು ನನ್ನ ಬೆಂಬಲಿಕ್ಕೆ ನಿಲ್ಲಲಿಲ್ಲ. ನನ್ನನ್ನು ನೋಡಿ ನಕ್ಕರು ಎಂದಿದ್ದಾರೆ.

ಕನ್ನಡ,ತಮಿಳು ಚೀನಾ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಗೆ ಬಾಲಿವುಡ್​ನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಸದ್ಯ ವೆಬ್​ ಸೀರಿಸ್​​ವೊಂದರಲ್ಲಿ ಅವರು ನಟಿಸುತ್ತಿದ್ದಾರೆ.

ABOUT THE AUTHOR

...view details